– ಮೂವರ ಮೇಲೆ ಪ್ರಕರಣ ದಾಖಲು
ಧಾರವಾಡ: ಕೊಲೆ ಸುಪಾರಿ ಪ್ಲಾನ್ ಪ್ರಕರಣಕ್ಕೆ ಸಂಬಂಧಿಸಿ ಧಾರವಾಡ ಗ್ರಾಮೀಣ ಪೊಲೀಸರು ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಧಾರವಾಡದ ಬೇಲೂರು ಗ್ರಾಮದ ಆನಂದ್ ಎಂಬವರ ಕೊಲೆ ಸ್ಕೆಚ್ ಹಾಕಿದ್ದ ಧಾರವಾಡ ತಾಲೂಕಿನ ಕೋಟೂರು ಗ್ರಾಮದ ಈರನಗೌಡ ಹಾಗೂ ನಾಗರಾಜ್ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತ ಆನಂದ್ ಕೊಲೆ ಸುಪಾರಿ ತೆಗೆದುಕೊಳ್ಳುವವನ ಹಾಗೂ ಸುಪಾರಿ ಕೊಡುವವರ ಆಡಿಯೋ ಕಳೆದ ಎರಡು ದಿನಗಳ ಹಿಂದೆ ಬಯಲಾಗಿತ್ತು. ಇದನ್ನೂ ಓದಿ: 80 ಕಡೆ ದುರ್ಗಾಮೂರ್ತಿ ಪ್ರತಿಷ್ಠಾಪನೆಗೆ ಮನವಿ – ದಸರಾ ಮಾರ್ಗಸೂಚಿಗಾಗಿ ಎದುರುನೋಡ್ತಿರುವ ಬಿಬಿಎಂಪಿ
ಈ ಆಡಿಯೋ ಸಿಕ್ಕ ನಂತರ ಆನಂದ್ ಪೊಲೀಸ್ ಠಾಣೆಯ ಮೇಟ್ಟಿಲೇರಿದ್ದರು. ಹೀಗಾಗಿ ಕೊಲೆ ಸುಪಾರಿ ಪಡೆದ ನಂದೀಶ್ ಮೇಲೆ ಕೂಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತ ಈರನಗೌಡ, ಕಾಂಗ್ರೆಸ್ ಕಾರ್ಯಕರ್ತ ಆನಂದ್ ಅವರನ್ನು ಕೊಲೆ ಮಾಡಿ ಪೀಸ್ ಪೀಸ್ ಮಾಡಿ, ಮಲಪ್ರಭಾ ನದಿಗೆ ಎಸೆಯಲು ಹೇಳಿದ್ದರು. ಇದನ್ನೂ ಓದಿ: ಬೆಳೆಹಾನಿ ಬಗ್ಗೆ ಅಳಲು ತೋಡಿಕೊಂಡ ರೈತರ ವಿಡಿಯೋಗಳು ಪುಲ್ ವೈರಲ್
ಕೊಲೆ ಮಾಡಿದರೆ ಬಿಂದಾಸಾಗಿ ಓಡಾಡಬಹುದು. ಮೂರೆ ತಿಂಗಳಲ್ಲಿ ಡಾನ್ ಆಗಬಹುದು ಎಂಬ ಮಾತುಗಳು ಆ ಆಡಿಯೋದಲ್ಲಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.