ಶವರಿಮಲೆ/ಬೆಂಗಳೂರು: ಪ್ರತಿವರ್ಷದಂತೆ ಈ ಬಾರಿಯೂ ಶವರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವನ್ನು ಪಡೆದ ಭಕ್ತರು ಪುನೀತರಾಗಿದ್ದಾರೆ. ಈ ಬಾರಿ ಮಕರ ಜ್ಯೋತಿ ಭಾನುವಾರ ಸಂಜೆ 6.44ರ ಸುಮಾರಿಗೆ ಕಾಣಿಸಿಕೊಂಡಿತು.
ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡರು. ಈ ವಿಶೇಷವು ಪ್ರತಿ ವರ್ಷ ಜನವರಿ 14 ರ ಸಂಜೆ ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿ ದರ್ಶನವಾಗುತ್ತದೆ. ಜ್ಯೋತಿ ಕಾಣಿಸಿಕೊಂಡ ತಕ್ಷಣ ನೆರೆದಿದ್ದ ಭಕ್ತ ಸಮೂಹ ಗಟ್ಟಿ ಸ್ವರದಲ್ಲಿ ಅಯ್ಯಪ್ಪ ಸ್ವಾಮಿಯ ಹೆಸರನ್ನು ಹೇಳಿ ಜಯಘೋಷ ಮಾಡಿದರು.
Advertisement
Advertisement
ದೇಶದ ವಿವಿಧ ಭಾಗಗಳಿಂದ ಜಾತಿ, ಧರ್ಮ ಬೇದಭಾವವಿಲ್ಲದೆ ಆಗಮಿಸುವ ಭಕ್ತರು, ಅಯ್ಯಪ್ಪ ಸನ್ನಿಧಾನದಲ್ಲಿ ಜ್ಯೋತಿಯ ದರ್ಶನ ಪಡೆಯಲು ಎರಡು ಮೂರು ದಿನಗಳ ಮುಂಚೆಯೇ ಆಗಮಿಸುತ್ತಾರೆ.
Advertisement
ಐತಿಹಾಸಿಕ ಸಾಂಪ್ರದಾಯದಂತೆ ಪಂದಳದಿಂದ ಘೋಷಯಾತ್ರೆಯ ಮೂಲಕ ತಂದ ತಿರುವಾಭರಣಗಳನ್ನು ಅಯ್ಯಪ್ಪನಿಗೆ ತೊಡಿಸಿ ದೀಪಾರಾಧನೆ ನಡೆಸಿದ ಬಳಿಕ ಮಹಾ ಮಂಗಳರಾತಿಯನ್ನು ಮಾಡಲಾಗುತ್ತದೆ. ಈ ವೇಳೆ ಪೊನ್ನಂಬಲ ಬೆಟ್ಟದಲ್ಲಿ ಜ್ಯೋತಿ ಭಕ್ತರಿಗೆ ದರ್ಶನವಾಗುತ್ತದೆ.
Advertisement
ಗಂಗಾಧರನಿಗೆ ಭಾಸ್ಕರನ ಪೂಜೆ:
ಗವಿ ಗಂಗಾಧರ ನ ಸನ್ನಿಧಿಯಲ್ಲಿ ಸಂಜೆ 5.15 ರಿಂದ 5.30ರ ತನಕ ಭಾಸ್ಕರ ಮತ್ತು ಶಿವನ ಮುಖಾಮುಖಿಯಾಗಿದೆ. ಆದರೆ ಸಾಮಾನ್ಯವಾಗಿ ಮುವತ್ತು ಸೆಕೆಂಡ್ ಗಳ ಕಾಲ ಶಿವನನ್ನು ಆವರಿಸಿ ಪಥ ಬದಲಿಸುವ ಸೂರ್ಯ ಇಂದು ಬರೋಬ್ಬರಿ ಒಂದು ನಿಮಿಷ ಏಳು ಸೆಕೆಂಡ್ ಗಳ ಕಾಲ ಗಂಗಾಧರನನ್ನು ಬೆಳಕಿನಿಂದ ತೋಯಿಸಿ ಬಿಟ್ಟಿದ್ದ. ಈ ಘಟನೆಗೆ ಮುಖ್ಯ ಅರ್ಚಕರೇ ಅಚ್ಚರಿ ವ್ಯಕ್ತ ಪಡಿಸಿದ್ದು ಇದು ಸಾಮಾನ್ಯ ಪೂಜೆಯಲ್ಲ, ಮುಂದೆ ಬರುವ ರಕ್ತ ಚಂದನ ಎನ್ನುವ ಭೀಕರ ಗ್ರಹಣದ ಅಪಾಯವನ್ನು ಈ ಸೂರ್ಯನ ಪೂಜೆ ತಡೆಯಲಿದೆ ಎಂದು ವಿಶ್ಲೇಷಣೆ ನೀಡಿದ್ದಾರೆ.