ಮುಂಬೈ: ಬಹುತೇಕ ಮಹಿಳೆಯರು ತಮ್ಮ ನೆಚ್ಚಿನ ಧಾರಾವಾಹಿ ನೋಡೋದನ್ನು ಮಿಸ್ ಮಾಡಿಕೊಳ್ಳಲ್ಲ. ಬಾಲಿವುಡ್ ಲೈಲಾ, ಮಾದಕ ಚೆಲುವೆ ಸನ್ನಿ ಲಿಯೋನ್ ಸಹ ಧಾರಾವಾಹಿ ನೋಡುತ್ತಾರೆ. ಕೇವಲ ಧಾರಾವಾಹಿ ನೋಡೋದು ಮಾತ್ರವಲ್ಲದೇ ಕಲಾವಿದರೊಂದಿಗೆ ಡೈಲಾಗ್ ಹೇಳುತ್ತಾ ಆ್ಯಕ್ಟಿಂಗ್ ಕಲಿಯುತ್ತಿದ್ದಾರೆ.
ಶುಕ್ರವಾರ ಸನ್ನಿ ಲಿಯೋನ್, ಖಾಸಗಿ ವಾಹಿನಿಯಲ್ಲಿ ಪ್ರಸಾರವಾರುವ ‘ಕುಂಕುಮ್ ಭ್ಯಾಗ್ಯ’ ಸೀರಿಯಲ್ ನೋಡುತ್ತಾ, ನಟಿಯ ಡೈಲಾಗ್ ಗಳಿಗೆ ಡಬ್ಮ್ಯಾಶ್ ಮಾಡುತ್ತಿದ್ದಾರೆ. ತಮ್ಮ ಆ್ಯಕ್ಟಿಂಗ್ ವರ್ಕ್ ಶಾಪ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಏಳು ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದ್ದು, ನೆಟ್ಟಿಗರು ನೈಸ್, ಚೆನ್ನಾಗಿ ಹಿಂದಿ ಕಲಿಯುತ್ತಿದ್ದೀರಿ. ಸನ್ನಿ ಕೆಲವೊಮ್ಮೆ ಫನ್ನಿ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
Advertisement
Advertisement
ಜಿಸ್ಮ್-2 ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ಸನ್ನಿ ಲಿಯೋನ್, ತಮ್ಮ ಸಿನಿಮಾ ಮತ್ತು ಸಾಮಾಜಿಕ ಕೆಲಸಗಳಿಂದಾಗಿ ಅಭಿಮಾನಿಗಳ ಮೆಚ್ಚುಗೆಯ ನಟಿಯಾಗಿದ್ದಾರೆ. ಮೂರು ಮಕ್ಕಳ ತಾಯಿಯಾಗಿರುವ ಸನ್ನಿ ಲಿಯೋನ್, ಇತ್ತೀಚಿಗೆ ಪತಿ ಡೇನಿಯಲ್ ವೆಬರ್ ಜೊತೆಗೂಡಿ ಶಾಲೆಯೊಂದನ್ನು ಆರಂಭಿಸಿದ್ದಾರೆ.
Advertisement
Acting workshop 101 ???? pic.twitter.com/OKpaHI3nVs
— Sunny Leone (@SunnyLeone) June 28, 2019
Advertisement