ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್( sunny leone) ಅವರು ಕಾಣಿಸಿಕೊಳ್ಳುವ ಪ್ರತಿಯೊಂದು ಸಾಂಗ್ ಹಿಟ್ ಎನ್ನುವ ಮಟ್ಟಿಗೆ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಆದರೆ ಇವರ ಇತ್ತಿಚೀನ ಆಲ್ಬಮ್ ಸಾಂಗ್‍ನಲ್ಲಿ ಮಾಡಿರುವ ನೃತ್ಯ ಮಥುರಾ ಅರ್ಚರಕರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಪವಿತ್ರ ಕ್ಷೇತ್ರವಾದ ಮಥುರಾದ ಅರ್ಚಕರು ಸನ್ನಿ ಲಿಯೋನ್ ನೃತ್ಯದ ಆಲ್ಬಮ್ ಬಗ್ಗೆ ಆಕ್ಷೇಪಗಳನ್ನೆತ್ತಿದ್ದಾರೆ. ಮಧುಬನ್ ಮೇ ರಾಧಿಕಾ ನಾಚೆ ಎಂಬ ಹಾಡಿಗೆ ಸನ್ನಿ ಲಿಯೋನ್ ಅಸಭ್ಯ ರೀತಿಯಲ್ಲಿ ನೃತ್ಯ ಮಾಡಿದ್ದಾರೆ ಎಂಬುದು ಅರ್ಚಕರ ಆರೋಪವಾಗಿದೆ. ಈ ಹಾಡು ಕೃಷ್ಣ ಹಾಗೂ ರಾಧೆಯ ಪ್ರೀತಿಗೆ ಸಂಬಂಧಿಸಿದ್ದಾಗಿದ್ದು, ಸನ್ನಿ ಲಿಯೋನ್ ಇದಕ್ಕೆ ಆಕ್ಷೇಪಾರ್ಹ ರೀತಿಯಲ್ಲಿ ನೃತ್ಯ ಮಾಡಿರುವುದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
Advertisement
Advertisement
ಸನ್ನಿ ಲಿಯೋನ್ ಅವರ ಈ ವೀಡಿಯೋ ಆಲ್ಬಮ್ ನಿಷೇಧಿಸಬೇಕು ಹಾಗೂ ಸರ್ಕಾರ ಆಕೆಯ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಕೋರ್ಟ್ ಮೊರೆ ಹೋಗುತ್ತೇವೆ. ನೃತ್ಯದ ಭಾಗವಿರುವ ವೀಡಿಯೋವನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಕೋರುವವರೆಗೆ ಭಾರತದಲ್ಲಿರಲು ಆಕೆಗೆ ಅವಕಾಶ ನೀಡಬಾರದು ಎಂದು ಬೃಂದಾವನದ ಸಂತ್ ನವಲ್ ಗಿರಿ ಮಹಾರಾಜ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್
Advertisement
ಅಖಿಲ ಭಾರತೀಯ ತೀರ್ಥ ಪುರೋಹಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಹೇಶ್ ಪಾಠಕ್ ಅವರೂ ಸನ್ನಿ ಲಿಯೋನ್ ನೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಅವಹೇಳನಕಾರಿ ರೀತಿಯಲ್ಲಿ ನೃತ್ಯ ಮಾಡುವ ಮೂಲಕ ಬೃಜ್ ಭೂಮಿಯ ಘನತೆಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಅಸಮಾಧಾನವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ನಮಗೆ ಗೊತ್ತು ನೀವು ನಮ್ಮನ್ನ ಬಿಟ್ಟು ಹೋಗಿಲ್ಲ: ತಂದೆಯನ್ನು ನೆನೆದು ಶಿಲ್ಪಾ ಶೆಟ್ಟಿ ಪೋಸ್ಟ್
ಸರಿಗಮ ಮ್ಯೂಸಿಕ್ ಡಿಸೆಂಬರ್ 22ರಂದು ಮಧುಬನ್ (Madhuban) ಶೀರ್ಷಿಕೆಯಡಿ ಮ್ಯೂಸಿಕ್ ವೀಡಿಯೋವನ್ನು ಬಿಡುಗಡೆ ಮಾಡಿದ್ದು, ಕನಿಕ ಕಪೂರ್ ಹಾಗೂ ಅರಿಂದಮ್ ಚಕ್ರವರ್ತಿ ಹಾಡಿರುವ ಹಾಡಿಗೆ ಸನ್ನಿ ಲಿಯೋನ್ ನೃತ್ಯ ಮಾಡಿದ್ದಾರೆ. ಆದರೆ ಈ ಹಾಡಿನಲ್ಲಿ ಸನ್ನಿ ಲಿಯೋನ್ ಮಾಡಿರುವ ನೃತ್ಯದ ಕುರಿತಾಗಿ ಆಕ್ಷೇಪ ವ್ಯಕ್ತವಾಗುತ್ತಿದೆ.