ಸಿನಿಮಾವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾಳೆ ಮಾದಕ ನಟಿ ಸನ್ನಿ ಲಿಯೋನ್ ಬೆಂಗಳೂರಿಗೆ ಆಗಮನಿಸುತ್ತಿದ್ದಾರೆ. ಸಿನಿಮಾ ಕಾರ್ಯಕ್ರಮದ ಮುಗಿದ ನಂತರ ಅವರು ಮಂಡ್ಯಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಸನ್ನಿ ಲಿಯೋನ್ ಆಗಲಿ ಅಥವಾ ಸಿನಿಮಾ ತಂಡವಾಗಲಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದನ್ನೂ ಓದಿ : ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ : ಶ್ರೀಮುರುಳಿ ನಾಯಕ
ಮೊನ್ನೆಯಷ್ಟೇ ಸನ್ನಿ ಲಿಯೋನ್ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಅದೇ ದಿನ ಮಂಡ್ಯದ ಸನ್ನಿ ಲಿಯೋನ್ ಅಭಿಮಾನಿಗಳು ಕೂಡ ಅದ್ದೂರಿಯಾಗಿಯೇ ಸನ್ನಿ ಲಿಯೋನ್ ಬರ್ತಡೆ ಆಚರಿಸಿದ್ದರು. ನೆಚ್ಚಿನ ನಟಿಯ ಹುಟ್ಟು ಹಬ್ಬಕ್ಕಾಗಿ ರಕ್ತದಾನ ಶಿಬಿರ ಕೂಡ ಮಾಡಿದ್ದರು. ಅದು ದೊಡ್ಡ ಸುದ್ದಿಯಾಗಿತ್ತು. ಮಾಧ್ಯಮಗಳು ಆ ಸುದ್ದಿಯನ್ನು ಕವರ್ ಮಾಡಿದ್ದವು. ಹೀಗಾಗಿ ಸನ್ನಿ ಲಿಯೋನ್ ಅವರಿಗೆ ವಿಷಯ ತಿಳಿದು, ಸಂಭ್ರಮಿಸಿದ್ದರು. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್
ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯದಲ್ಲಿ ತಮ್ಮ ಅಭಿಮಾನಿಗಳು ಇದ್ದಾರೆ ಎಂದು ತಿಳಿದು ಅಚ್ಚರಿ ವ್ಯಕ್ತ ಪಡಿಸಿ, ತಮ್ಮ ಹುಟ್ಟು ಹಬ್ಬದ ದಿನದಂದು ರಕ್ತದಾನ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. ಅಭಿಮಾನಿಗಳಿಗಾಗಿ ತಾವು ಕೂಡ ರಕ್ತದಾನ ಮಾಡುವುದಾಗಿ ತಿಳಿಸಿದ್ದರು. ಹೀಗಾಗಿ ನಾಳೆ ಮಂಡ್ಯಗೆ ಹೋಗಿ ರಕ್ತದಾನ ಮಾಡುತ್ತಾರಾ? ಅಥವಾ ಮಂಡ್ಯದ ಅಭಿಮಾನಿಗಳನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಧನ್ಯವಾದ ತಿಳಿಸುತ್ತಾರೆ ಎನ್ನುವುದು ಸದ್ಯದ ಕುತೂಹಲ.
ಈಗಾಗಲೇ ಸನ್ನಿ ಲಿಯೋನ್ ಕನ್ನಡದ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಕನ್ನಡ ಸಿನಿಮಾವೊಂದರ ಗೀತೆಗೆ ಹೆಜ್ಜೆ ಹಾಕಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಟಿಸುವಂತೆ ಅವಕಾಶ ಬಂದರೆ, ಯಾವುದೇ ಕಾರಣಕ್ಕೂ ನಿರಾಕರಿಸಲಾರೆ ಎಂದು ಈ ಹಿಂದೆಯೇ ಅವರು ಹೇಳಿದ್ದಾರೆ. ಹಾಗಾಗಿ ಅವಕಾಶ ಸಿಕ್ಕಾಗೆಲ್ಲ ಬೆಂಗಳೂರಿಗೆ ಬಂದು ನಟಿಸಿ ಹೋಗುತ್ತಾರೆ.