ಮುಂಬೈ: ಸನ್ನಿ ಲಿಯೋನ್ ಹೆಸರಿನಲ್ಲಿಯೇ ಮಾದಕತೆ ತುಂಬಿಕೊಂಡಿರುವ ಬಾಲಿವುಡ್‍ನ ಹಾಟ್ ನಟಿ. ಕೆಲವು ದಿನಗಳಿಂದ ಸನ್ನಿಯ ಆತ್ಮಕಥನ `ಕರಣಜೀತ್ ಕೌರ: ದಿ ಅನ್‍ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ಸಾಕಷ್ಟು ಚರ್ಚೆಯಲ್ಲಿದೆ. ಸನ್ನಿ ಲಿಯೋನ್ ಖಾಸಗಿ ಜೀವನವನ್ನು ರಿವೀಲ್ ಮಾಡುವ ಕರಣಜೀತ್ ಕೌರ್‍ಗಾಗಿ ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ.
ಸನ್ನಿಲಿಯೋನ್ ಜೀವನಾಧರಿತ ಕಥೆಯನ್ನು ಒಳಗೊಂಡ ವೆಬ್ ಸಿರೀಸ್ ಆರಂಭವಾಗಲಿದೆ. ಈ ವೆಬ್ ಸಿರೀಸ್‍ನಲ್ಲಿ ಸನ್ನಿ ಲಿಯೋನ್ ತಮ್ಮ ಪಾತ್ರವನ್ನು ತಾವೇ ನಟಿಸುತ್ತಿರೋದು ಮತ್ತೊಂದು ವಿಶೇಷ. ಆದ್ರೆ ಪತಿಯ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ? ರಿಯಲ್ ಲೈಫ್‍ನ ಸಂಗಾತಿ ಡೇನಿಯಲ್ ವೆಬರ್ ಬಣ್ಣ ಹಚ್ಚುತ್ತಾರೆ ಎಂಬ ಮಾತುಗಳು ಬಾಲಿವುಡ್‍ನ ಗಲ್ಲಿ ಗಲ್ಲಿಗಳಲ್ಲಿ ಹರಿದಾಡಿದ್ದವು. ಈ ಎಲ್ಲ ಪ್ರಶ್ನೆಗಳಿಗೆ ಸನ್ನಿ ಲಿಯೋನ್ ಉತ್ತರ ನೀಡಿದ್ದಾರೆ.
ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಪಾತ್ರದಲ್ಲಿ ದಕ್ಷಿಣ ಆಫ್ರಿಕಾದ ಯುವ ನಟ ಮಾರ್ಕ್ ಬಕನರ್ ನಟಿಸೋದು ಪಕ್ಕಾ ಆಗಿದೆ. ಕರಣಜೀತ್ ಕೌರ ವೆಬ್ ಸಿರೀಸ್‍ನ ಶೂಟಿಂಗ್ ಸೆಟ್‍ನಲ್ಲಿ ಸನ್ನಿ ಲಿಯೋನ್ ತನ್ನ ರೀಲ್ ಲೈಫ್ ಪತಿಯೊಂದಿಗಿನ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಸನ್ನಿ ನಿಜ ಜೀವನದಲ್ಲಿ ಡೇನಿಯಲ್ ವೆಬರ್ ಅತ್ಯಂತ ಪ್ರಮುಖ ವ್ಯಕ್ತಿ. ಸನ್ನಿಯ ವೃತ್ತಿ ಜೀವನ ಮತ್ತು ಖಾಸಗಿ ಜೀವನದಲ್ಲಿಯೂ ಮಹತ್ವದ ವ್ಯಕ್ತಿ ಡೇನಿಯಲ್ ವೆಬರ್. 7 ವರ್ಷಗಳ ಹಿಂದೆ ಸಾಂಸರಿಕ ಜೀವನಕ್ಕೆ ಕಾಲಿಟ್ಟ ಸನ್ನಿ ಮತ್ತು ಡೆನಿಯಲ್ ಅನ್ಯೋನ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಸದ್ಯ ರೊಮ್ಯಾಂಟಿಕ್ ದಂಪತಿ ಮೂರು ಮಕ್ಕಳನ್ನು ಹೊಂದಿದ್ದಾರೆ. 2017ಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದ, ಸನ್ನಿ ಈ ವರ್ಷ ಬಾಡಿಗೆ ತಾಯಿಯ ಸಹಾಯದಿಂದ ಮತ್ತೆರೆಡು ಮುದ್ದಾದ ಮಕ್ಕಳ ತಾಯಿ ಆಗಿದ್ದಾರೆ.
https://www.instagram.com/p/BkhnpaXh1cJ/?taken-by=sunnyleone
https://www.instagram.com/p/BkU0GbMFvkb/?taken-by=marcbuckner
https://www.instagram.com/p/BfO4D4slcH-/?taken-by=marcbuckner