ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಯಿಂದ ದೂರ ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಸನ್ನಿ ತಮ್ಮ ಪತಿ ಡೇನಿಯಲ್ ವೆಬ್ಬರ್ ಜೊತೆ ಫಿಲ್ಮ್ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಚಿತ್ರೀಕರಣಕ್ಕಾಗಿ ಸನ್ನಿ ಇಷ್ಟು ದಿನ ಬೇರೆ ದೇಶಕ್ಕೆ ತೆರಳಿದ್ದರು. ಇದೀಗ ಅವರು ಭಾರತಕ್ಕೆ ಹಿಂತಿರುಗಿದ್ದು, ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಸನ್ನಿ ಅಭಿಮಾನಿಗಳಿಂದ ದೂರ ಓಡಿದ್ದಾರೆ. ಸನ್ನಿ ಯಾವಾಗಲೂ ತಮ್ಮ ಚಿತ್ರತಂಡದ ಜೊತೆ ಎಂಜಾಯ್ ಮಾಡುತ್ತಿರುತ್ತಾರೆ. ಅಲ್ಲದೆ ಅಭಿಮಾನಿಗಳು ಸೆಲ್ಫಿ ಕೇಳಿದರೆ ಅವರನ್ನು ನಿರಾಸೆ ಮಾಡದೇ ಪೋಸ್ ನೀಡುತ್ತಾರೆ. ಆದರೆ ಈಗ ಕೊರೊನಾ ವೈರಸ್‍ನಿಂದಾಗಿ ಸನ್ನಿ ಅಭಿಮಾನಿಗಳಿಗೆ ಸೆಲ್ಫಿ ನೀಡಲು ಹಿಂಜರಿಯುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?
Advertisement
View this post on Instagram
Advertisement
ಇಂದು ಬೆಳಗ್ಗೆ ಸನ್ನಿ ತಮ್ಮ ಪತಿ ಡೇನಿಯಲ್ ಜೊತೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರು ತಮ್ಮ ಕೈಯಲ್ಲಿ ಮಾಸ್ಕ್ ಹಿಡಿದುಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಸನ್ನಿ ಅವರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆಗ ಚಿತ್ರತಂಡ ಸೆಲ್ಫಿ ಕ್ಲಿಕ್ಕಿಸಕೊಳ್ಳಬೇಡಿ ಎಂದು ಹೇಳಿದ್ದಾರೆ. ಹೀಗಿದ್ದರೂ ಸಹ ಯುವತಿಯೊಬ್ಬಳು ಸನ್ನಿ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿದ್ದಾಳೆ. ಆಗ ತಕ್ಷಣ ಸನ್ನಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುತ್ತಾರೆ. ಯುವತಿ ಮಾಸ್ಕ್ ತೆಗೆಯಿರಿ ಎಂದು ಹೇಳಿದಾಗ ಸನ್ನಿ ಅಲ್ಲಿಂದ ಹೊರಟು ಹೋಗಿದ್ದಾರೆ.
Advertisement
Safe is the new COOL with @DanielWeber99 !!
Don’t be ignorant about what is happening around you or think the Coronavirus can’t affect you!
Be smart and be safe! #BeSafe #India #coronavirus pic.twitter.com/Gwl8fBCnwz
— Sunny Leone (@SunnyLeone) January 29, 2020
Advertisement
ಚೀನಾದಿಂದ ಶುರುವಾದ ಕೊರೊನಾ ವೈರಲ್ ಕಡಿಮೆ ಸಮಯದಲ್ಲೇ ವಿಶ್ವಾದ್ಯಂತ ಹರಡಿದೆ. ಭಾರತದಲ್ಲೂ ಕೊರೊನಾ ವೈರಸ್ ಹರಡಿದೆ ಎಂದು ಶಂಕಿಸಲಾಗುತ್ತಿದೆ. ಇದುವರೆಗೂ ಈ ವೈರಸ್‍ನಿಂದಾಗಿ ಚೀನಾದಲ್ಲಿ 132 ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ವೈರಸ್‍ನಿಂದಾಗಿ ಸನ್ನಿ ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಸನ್ನಿ ತಮ್ಮ ಟ್ವಿಟ್ಟರಿನಲ್ಲಿ ಪತಿ ಡೇನಿಯಲ್ ಜೊತೆ ಮಾಸ್ಕ್ ಹಾಕಿಕೊಂಡಿರುವ ಫೋಟೋ ಹಾಕಿ ಅದಕ್ಕೆ, ಕೊರೊನಾ ವೈರಸ್ ನಿಮಗೂ ಬರಬಹುದು. ಹುಷಾರಾಗಿರಿ, ಸುರಕ್ಷಿತವಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.