ಮುಂಬೈ: ಬಾಲಿವುಡ್ ಮಾದಕ ಬೆಡಗಿ ಸನ್ನಿ ಲಿಯೋನ್ ಮೆಕ್ಸಿಕೋದಲ್ಲಿ ತೆಗೆದ ಬಿಕಿನಿ ಫೋಟೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದಾರೆ.
ಸನ್ನಿ ಲಿಯೋನ್ ಅವರು ತನ್ನ ಪತಿ ಹಾಗೂ ಸ್ನೇಹಿತರ ಜೊತೆ ಮೆಕ್ಸಿಕೋದಲ್ಲಿ ತನ್ನ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ. ಸದ್ಯ ಮೆಕ್ಸಿಕೋದಲ್ಲಿ ತೆಗೆದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಸನ್ನಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಬಿಳಿ ಬಿಕಿನಿ ಧರಿಸಿ ಅದಕ್ಕೆ ಬಿಳಿ ಹ್ಯಾಟ್ ಹಾಕಿ ನಡೆದುಕೊಂಡು ಹೋಗುತ್ತಿರುವ ಫೋಟೋವನ್ನು ಸನ್ನಿ ಶೇರ್ ಮಾಡಿದ್ದಾರೆ. ಅವರು ಈ ಫೋಟೋ ಶೇರ್ ಮಾಡಿದ ಒಂದು ಗಂಟೆಗೆ 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ ಕಮೆಂಟ್ಸ್ ಬಂದಿದೆ.
View this post on Instagram
ಇತ್ತೀಚೆಗೆ ಸನ್ನಿ ಲಿಯೋನ್ ತನ್ನ ಸಹ ಸಿಬ್ಬಂದಿಯೊಂದಿಗೆ ಸ್ಟೆಪ್ ಹಾಕಿದ್ದ ವಿಡಿಯೋವೊಂದು ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿತ್ತು. ಸನ್ನಿ ಬಿಳಿ ಬಣ್ಣದ ಕ್ಯಾಪ್ ಧರಿಸಿ, ಕೆಂಪು-ನೀಲಿ ಮಿಶ್ರಿತ ಜರ್ಕಿನ್ ಮತ್ತು ಜಿನ್ಸ್ ಧರಿಸಿ ತನ್ನ ಸಿಬ್ಬಂದಿಯೊಂದಿಗೆ `ಬೋಲೋ ತಾರಾ ರಾ ರಾ’ ಪಂಜಾಬಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದರು.
ಸದ್ಯಕ್ಕೆ ಸನ್ನಿ ಲಿಯೋನ್ ತಮಿಳು ಚಿತ್ರ ವೀರಮ್ಮದೇವಿಯಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ನಡುವೆಯೂ ಸನ್ನಿ ತನ್ನ ಮೂವರು ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಸದ್ಯ ಈಗ ಅವರು ತಮ್ಮ ರಜೆಯನ್ನು ಕಳೆಯಲು ಮೆಕ್ಸಿಕೋಗೆ ಹಾರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv