ಬೆಂಗಳೂರು: ಸನ್ನಿ ಲಿಯೋನ್ ಕಾರ್ಯಕ್ರಮದ ಪರ, ವಿರೋಧ ಪ್ರತಿಭಟನೆಗೂ ನಮಗೂ ಸಂಬಂಧವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದೆ.
ಈ ಸಂಬಂಧ ಫೇಸ್‍ಬುಕ್ ನಲ್ಲಿ ಕರವೇ ಸಂಘಟನೆಯ ಹೆಸರನ್ನು ಯಾರೇ ದುರ್ಬಳಕೆ ಮಾಡಿದರೂ ಅದಕ್ಕೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು ತಿಳಿಸಿದ್ದಾರೆ ಎಂದು ಪೋಸ್ಟ್ ಪ್ರಕಟಿಸಿದೆ.
Advertisement
ಪೋಸ್ಟ್ ನಲ್ಲಿ ಏನಿದೆ?
ಕೆಲವು ಮಾಧ್ಯಮಗಳಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಕರವೇ ಟಿಕೆಟ್ ಗಳನ್ನು ಕಾಯ್ದಿರಿಸಿದೆ ಅನ್ನುವ ಸುದ್ದಿ ಬಂದಿದೆ ಮತ್ತು ಕೆಲವು ಮಾಧ್ಯಮಗಳಲ್ಲಿ ಕರವೇ ಈ ಕಾರ್ಯಕ್ರಮದ ವಿರುದ್ಧ ಪ್ರತಿಭಟಿಸುತ್ತಿದೆ ಅನ್ನುವ ಸುದ್ದಿ ಬಂದಿದೆ. ನಮ್ಮ ಸಂಘಟನೆಗೂ ಸನ್ನಿ ಲಿಯೋನ್ ಕಾರ್ಯಕ್ರಮದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಸುದ್ದಿ ಪ್ರಕಟಿಸುವ ಮುನ್ನ ಕರವೇಯ ಅಧಿಕೃತ ವಕ್ತಾರರ ಬಳಿ ಮಾಹಿತಿ ಸಂಗ್ರಹಿಸಿ ಪ್ರಕಟಿಸುವುದು ಒಳಿತು. ತಪ್ಪು ಸುದ್ದಿ ಹಂಚುವುದು ನ್ಯಾಯ ಸಮ್ಮತವಲ್ಲ.
Advertisement
Advertisement
ಕರವೇ ಸಂಘಟನೆಯ ಹೆಸರನ್ನು ಯಾರೇ ದುರ್ಬಳಕೆ ಮಾಡಿದರೂ ಅದಕ್ಕೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು ತಿಳಿಸಿದ್ದಾರೆ. ಇದೇ ನಿಟ್ಟಿನಲ್ಲಿ ನಾರಾಯಣಗೌಡರು ರಾಜ್ಯ ಪೋಲೀಸ್ ಮಹಾ ನಿರ್ದೇಶಕರಿಗೆ ಮತ್ತು ಆಯುಕ್ತರ ಜೊತೆ ಮಾತನಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv