ಬೆಂಗಳೂರು: ಸನ್ನಿ ಲಿಯೋನ್ ಪಡ್ಡೆ ಹುಡುಗರ ಮನದರಸಿ ಎಂಬುದು ತಿಳಿದಿರುವ ವಿಚಾರ. ಆದರೆ ವಯಸ್ಸಾದವರಿಗೂ ಸನ್ನಿ ಅಷ್ಟೇ ಫೇವರಿಟ್ ಎಂಬುದು ಇದೀಗ ತಿಳಿದಿದೆ. ಎಲ್ಲ ವಯೋಮಾನದವರೂ ಸನ್ನಿಗೆ ಫಿದಾ ಆಗಿದ್ದಾರೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ.
ಹೌದು, ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಭಾಗವಹಿಸಿದ್ದರು. ಅವರನ್ನು ನೋಡಲು ಅನೇಕರು ಜಮಾಯಿಸಿದ್ದರು. ಜೊತೆಗೆ ಬಾಲಿವುಡ್ ಸೆಲೆಬ್ರಿಟಿಗಳ ದೊಡ್ಡ ಬಳಗವೇ ಅಲ್ಲಿ ನೆರೆದಿತ್ತು. ಇದೇ ಸಮಯ ಬಳಸಿಕೊಂಡ ಹಿರಿಯ ನಟ ಕಬೀರ್ ಬೇಡಿ ಪ್ಲ್ಯಾನ್ ಮಾಡಿದರು. ಕಾರ್ಯಕ್ರಮದಲ್ಲಿ ಖುಷಿಯಿಂದ ಓಡಾಡಿಕೊಂಡಿದ್ದ ಸನ್ನಿ ಲಿಯೋನ್ ಬಳಿಗೆ ತೆರಳಿ ‘ನಿಮ್ಮ ಫೋನ್ ನಂಬರ್ ಕೊಡಿ’ ಎಂದು ಕೇಳಿಯೇ ಬಿಟ್ಟರು.
ಇದ್ದಕ್ಕಿದ್ದಂತೆ ಯಾರೋ ಫೋನ್ ನಂಬರ್ ಕೇಳಿದರೆ ವಿಚಲಿತರಾಗುವುದು ಸಾಮಾನ್ಯ. ಆದರೆ ಸನ್ನಿ ಲಿಯೋನ್ ಈ ಸಂದರ್ಭವನ್ನು ಉತ್ತಮವಾಗಿಯೇ ನಿಭಾಯಿಸಿದರು. 74 ವರ್ಷದ ನಟ ಕಬೀರ್ ಬೇಡಿ ಹೀಗೆ ಎಲ್ಲರ ಸಮ್ಮುಖದಲ್ಲಿ ಫೋನ್ ನಂಬರ್ ಕೇಳಿದಾಗ ಸನ್ನಿ ಲಿಯೋನ್ ಕಿಂಚಿತ್ತೂ ವಿಚಲಿತರಾಗಲೇ ಇಲ್ಲ. ಅಲ್ಲದೆ ಇಂಥ ಸಂದರ್ಭಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದು ಅವರಿಗೆ ಚೆನ್ನಾಗಿ ಕರಗತ ಆದಂತಿದೆ. ಕಬೀರ್ ಮನವಿಯನ್ನು ತುಂಬ ಕೂಲ್ ಆಗಿಯೇ ಸನ್ನಿ ಸ್ವೀಕರಿದರು. ಆದರೆ ತಮ್ಮ ನಂಬರ್ ಕೊಡುವ ಬದಲಿಗೆ ಪತಿ ಡೇನಿಯಲ್ ವೆಬ್ಬರ್ ಅವರ ಫೋನ್ ನಂಬರ್ ನೀಡಿ ಕೈ ತೊಳೆದುಕೊಂಡರು.
ಇನ್ನು, ಈ ಸಂದರ್ಭದಲ್ಲಿ ಕಬೀರ್ ಬೇಡಿಯವರ ಖಾಸಗಿ ಬದುಕಿನ ಬಗ್ಗೆ ಮೆಲುಕು ಹಾಕುವುದಾದರೆ, ಅವರು ನಾಲ್ಕು ಮದುವೆ ಆಗಿದ್ದಾರೆ. ಇತ್ತೀಚೆಗೆ ತಮ್ಮ 70ನೇ ವಯಸ್ಸಿನಲ್ಲಿ ಬಹುಕಾಲದ ಗೆಳತಿ ಪರ್ವೀನ್ ದುಸಾಂಜ್ ಜೊತೆ ನಾಲ್ಕನೇ ಮದುವೆ ಆಗುವ ಮೂಲಕ ಎಲ್ಲರಿಗೂ ಅವರು ಶಾಕ್ ನೀಡಿದ್ದರು.