ಬಾಲಿವುಡ್ ನಟಿ ಸನ್ನಿ ಲಿಯೋನ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದೊಂದು ಹಾಡಿಗೆ, ಅತಿಥಿ ಪಾತ್ರದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಈ ನೀಲಿತಾರೆ, ಇದೀಗ ಅಚ್ಚರಿ ಎನ್ನುವಂತಹ ಸುದ್ದಿಯನ್ನು ಕೊಟ್ಟಿದ್ದಾರೆ. ಭಾರತ ಗುಪ್ತಚರ ಇಲಾಖೆ ರಾ ಏಜೆಂಟ್ ಆಗಿ ಅಭಿಮಾನಿಗಳ ಮುಂದೆ ನಿಲ್ಲಲಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಸಿಂಡ್ರೆಲಾ ಹೊಸ ನ್ಯೂಸ್ ಕೊಡ್ತಾರಾ?
ಹಾಗಂತ ಅವರು ಭಾರತ ಗುಪ್ತಚರ ಇಲಾಖೆಗೆ ಸೇರಿಕೊಂಡರು ಅಂತ ಕನ್ ಫ್ಯೂಸ್ ಆಗಬೇಡಿ, ಅಂಥದ್ದೊಂದು ಪಾತ್ರವನ್ನು ಸನ್ನಿ, ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಅವರು ಹೊಸ ಜಗತ್ತಿಗೆ ಕಾಲಿಡುತ್ತಿದ್ದಾರೆ. ಇದನ್ನೂ ಓದಿ : ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್
ಈಗಾಗಲೇ ಅನಾಮಿಕ ಹೆಸರಿನಲ್ಲಿ ಈ ವೆಬ್ ಸಿರೀಸ್ ಶೂಟಿಂಗ್ ಶುರುವಾಗಿದ್ದು, ಅಲ್ಲಿ ಸನ್ನಿಯದ್ದು ರಾ ಏಜೆಂಟ್ ಪಾತ್ರ. ಹಲವು ಕೇಸ್ ಗಳನ್ನು ಬೆನ್ನಹತ್ತಿ ರೋಚಕ ವಿಷಯಗಳನ್ನು ಜನರ ಮುಂದೆ ಇಡುವ ಪ್ರಯತ್ನ ಈ ಸಿರೀಸ್ ಮಾಡಲಿದೆಯಂತೆ. ಇದನ್ನೂ ಓದಿ : ಹಿರಣ್ಯ ಸಿನಿಮಾದ ಸ್ಪೆಷಲ್ ಪಾತ್ರದಲ್ಲಿ ಬಿಗ್ ಬಾಸ್ ದಿವ್ಯಾ
ಅನಾಮಿಕ ವೆಬ್ ಸಿರೀಸ್ ನಲ್ಲಿ ಇವರ ಪಾತ್ರದ ಹೆಸರು ಏಜೆಂಟ್ ‘ಎಂ’ ಎಂದು. ಈಗಾಗಲೇ ಇದರ ಟ್ರೇಲರ್ ಕೂಡ ರಿಲೀಸ್ ಆಗಿದ್ದು, ಸನ್ನಿ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂತಹ ಸಾಕಷ್ಟು ಪಾತ್ರಗಳಲ್ಲಿ ಈ ತಾರೆ ಅಭಿನಯಿಸಲಿ ಎಂದು ಹಾರೈಸಿದ್ದಾರೆ.