ವಾಷಿಂಗ್ಟನ್: ತನ್ನ ಮುಂದಿನ ಸಿನಿಮಾ ತೇರಾ ಇಂತಝಾರ್ ಬಿಡುಗಡೆಗೂ ಮುನ್ನ ಸನ್ನಿ ಲಿಯೋನ್, ಪತಿ ಡೇನಿಯಲ್ ವೆಬರ್ ಮತ್ತು ಮಗಳು ನಿಶಾ ಜೊತೆ ಅಮೂಲ್ಯ ಸಮಯವನ್ನ ಕಳೆಯುತ್ತಿದ್ದಾರೆ. ಇಂದು ವೆಬರ್ ದಂಪತಿ ಆರಿಝೋನಾದಲ್ಲಿ ಮಗಳು ನಿಶಾಳ 2ನೇ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.
ಮುದ್ದು ಮಗಳ ಹುಟ್ಟುಹಬ್ಬಕ್ಕಾಗಿ ಹೆಲ್ಲೋ ಕಿಟಿ ಥೀಮ್ ಆಯ್ಕೆ ಮಾಡಿಕೊಂಡಿದ್ದಾರೆ. ನಿಶಾ ನೀಲಿ ಬಣ್ಣದ ಬಟ್ಟೆ ಧರಿಸಿದ್ದು, ತಲೆಗೆ ಸುಂದರವಾದ ಕಿರೀಟ ತೊಟ್ಟು ರಾಜಕುಮಾರಿಯಂತೆ ಕಂಗೊಳಿಸಿದ್ದಾಳೆ. ಸದ್ಯಕ್ಕೆ ಸನ್ನಿ ಕುಟುಂಬ ಅಮೆರಿಕ ಪ್ರವಾಸದಲ್ಲಿದೆ.
Advertisement
Advertisement
ರಾಜೀವ್ ವಾಲಿಯಾ ನಿರ್ದೇಶನದ ತೇರಾ ಇಂತಝಾರ್ ಸನ್ನಿಯ ಮುಂದಿನ ಸಿನಿಮಾ. ಈ ಚಿತ್ರದಲ್ಲಿ ಅರ್ಬಾಜ್ ಖಾನ್‍ಗೆ ಜೋಡಿಯಾಗಿ ಸನ್ನಿ ಲಿಯೋನ್ ಅಭಿನಯಿಸಿದ್ದಾರೆ. ಇದೇ ವರ್ಷ ನವೆಂಬರ್‍ಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.
Advertisement
ಇದನ್ನೂ ಓದಿ: ವಿವಾದಕ್ಕೆ ಕಾರಣವಾಗಿದೆ ಸನ್ನಿ ಮತ್ತು ಮಗುವಿನ ಫೋಟೋ!
Advertisement