ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಬೆಂಗಳೂರಿಗೆ ಆಗಮಿಸಿದ್ದಾರೆ. `ಚಾಂಪಿಯನ್’ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ, ಸನ್ನಿ ಬರ್ತಡೇ ಸೆಲೆಬ್ರೇಷನ್ ಆಚರಿಸಿದ್ದ ಮಂಡ್ಯ ಫ್ಯಾನ್ಸ್ ಕುರಿತು ಈ ವೇಳೆ ಸನ್ನಿ ಲಿಯೋನ್ ಮಾತನಾಡಿದ್ದಾರೆ.
Advertisement
ಹಿಂದಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಸನ್ನಿ ಲಿಯೋನ್ ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದಾರೆ. `ಚಾಂಪಿಯನ್’ ಚಿತ್ರದಲ್ಲಿ ಸ್ಪೆಷಲ್ ಸಾಂಗ್‌ವೊದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಚಿತ್ರದ ಕಾರ್ಯಕ್ರಮಕ್ಕೆ ನಟಿ ಸನ್ನಿ ಹಾಜರ್ ಆಗಿದ್ದಾರೆ.ಈ ವೇಳೆ ಸಿನಿಮಾ ತಂಡದ ಜತೆ ಬರ್ತಡೇ ಸೆಲೆಬ್ರೇಷನ್ ಆಚರಿಸಿದ ನಂತರ ಮಂಡ್ಯ ಹುಡುಗರ ಪ್ರೀತಿಗೆ ಅಭಿಮಾನಕ್ಕೆ ಸನ್ನಿ ಧನ್ಯವಾದ ತಿಳಿಸಿದ್ದಾರೆ.
Advertisement
View this post on Instagram
Advertisement
ಈ ವೇಳೆ ಮಾತನಾಡಿರುವ ಸನ್ನಿ, ನಾನು ಅತೀ ಶೀಘ್ರದಲ್ಲಿ ರಕ್ತದಾನ ಮಾಡುತ್ತೀನಿ. ಅವರ ಪ್ರೀತಿಗಾಗಿ ರಕ್ತದಾನ ಮಾಡಿ, ಫೋಟೋ ಶೇರ್ ಮಾಡುತ್ತೇನೆ. ಮಂಡ್ಯ ಫ್ಯಾನ್ಸ್ ನನ್ನ ಬರ್ತಡೇ ಸೆಲೆಬ್ರೇಷನ್ ಮಾಡಿದ್ದು ನೋಡಿದ್ದೀನಿ, ಅವರನ್ನ ಭೇಟಿಯಾಗಲು ಆಗಲಿಲ್ಲ. ಯಾವಾಗ ಮಾಡ್ತಿನಿ ಅನ್ನೊದನ್ನ ಹೇಳೋಕೆ ಆಗಲ್ಲ. ಮಂಡ್ಯ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಎಂದಿದ್ದಾರೆ. ಇದನ್ನೂ ಓದಿ: ಫ್ಯಾಮಿಲಿ ಫೋಟೋ ಶೇರ್ ಮಾಡಿದ ರಶ್ಮಿಕಾ ಮಂದಣ್ಣ
Advertisement
ಇನ್ನು ಕನ್ನಡ ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಸಿನಿಮಾ ಮಾಡುತ್ತೀನಿ. ಇನ್ನು `ಕೆಜಿಎಫ್ ೨’ ಚಿತ್ರ ನೋಡೋಕೆ ಆಗಿಲ್ಲ. ಮುಂದಿನ ದಿನಗಳಲ್ಲಿ ಮನೆಯಲ್ಲಿ ನೋಡುತ್ತೀನಿ ಅಂತಾ ಕನ್ನಡ ಸಿನಿಮಾಗಳ ಬಗ್ಗೆ ಸನ್ನಿ ಮಾತನಾಡಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.