ಮಾಜಿ ನೀಲಿತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಅಂದರೆ ಮೂಗು ಮುರಿದುಕೊಳ್ಳುವವರೆ ಜಾಸ್ತಿ. ಆಕೆ ನೀಲಿತಾರೆ ಎನ್ನುವ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬಹಿರಂಗವಾಗಿ ‘ತಾವು ಸನ್ನಿಲಿಯೋನ್ ಅಭಿಮಾನಿ’ ಎಂದು ಹೇಳಿಕೊಳ್ಳುವುದಿಲ್ಲ. ಇದನ್ನೂ ಓದಿ : ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ
Advertisement
ಆದರೆ, ಕರ್ನಾಟಕದಲ್ಲಿ, ಅದರಲ್ಲೂ ಹೈದರಾಬಾದ್ ಕರ್ನಾಟಕದಲ್ಲಿ ‘ಸನ್ನಿ ಲಿಯೋನ್ ಅಭಿಮಾನಿ ಸಂಘ’ಗಳು ಎರಡು ಇವೆ. ಬಹಿರಂಗವಾಗಿಯೇ ತಾವು ಸನ್ನಿ ಲಿಯೋನ್ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಎಂದು ಹೇಳುತ್ತಾರೆ. ಹೇಳುವುದಷ್ಟೇ ಅಲ್ಲ, ಸಂಘದ ಬ್ಯಾನರ್ ಅನ್ನು ಸೋಷಿಯಲ್ ಮೀಡಿಯಾದಲ್ಲೂ ಹಾಕುತ್ತಾರೆ. ಇದನ್ನೂ ಓದಿ : ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?
Advertisement
Advertisement
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟೆಯಲ್ಲಿ ‘ಸನ್ನಿ ಲಿಯೋನ್ ಬಾಯ್ಸ್’ ಸಂಘವಿದ್ದು, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹುಡಾ ಗ್ರಾಮದಲ್ಲಿ ‘ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳ’ ಸ್ಥಾಪನೆ ಆಗಿದೆ. ಈ ಎರಡೂ ಸಂಘಗಳು ಹಬ್ಬ ಹರಿದಿನಕ್ಕೆ, ಜಾತ್ರಾ ಮಹೋತ್ಸವಕ್ಕೆ ಹಾಗೂ ಮತ್ತಿತರ ಕಾರ್ಯಕ್ರಮಗಳಿಗೆ ಪೋಸ್ಟರ್, ಬ್ಯಾನರ್ಸ್ ಹಾಕಿ ಶುಭ ಕೋರುತ್ತಾರೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ
Advertisement
ಈ ಕುರಿತು ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳದ ಅಧ್ಯಕ್ಷ ಗೋಪಾಲ್, ‘ಸನ್ನಿ ಲಿಯೋನ್ ಅವರು ಸಮಾಜಕ್ಕೆ ಎಷ್ಟೊಂದು ಕೊಡುಗೆ ಕೊಟ್ಟಿದ್ದಾರೆ. ಪ್ರಕೃತಿ ವಿಕೋಪ, ನೆರೆ ಹಾವಳಿ, ಕೊರೋನಾ ಸಂದರ್ಭದಲ್ಲಿ ಅವರು ಜನರ ಬಗ್ಗೆ ತೋರಿದ ಕಾಳಜಿಯನ್ನು ನಾವು ಮರೆಯುವುದಿಲ್ಲ. ಅವರ ಒಳ್ಳೊಳ್ಳೆ ಕೆಲಸಗಳನ್ನು ಮೆಚ್ಚಿ ನಾವು ಸಂಘ ಮಾಡಿದ್ದೇವೆ’ ಎಂದು ಈ ಹಿಂದೆ ಮಾಧ್ಯಮಗಳ ಜತೆ ಮಾತನಾಡುತ್ತಾ ಹೇಳಿದ್ದರು.
ಈಗ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟೆ ಗ್ರಾಮದ ಜಾತ್ರಾ ಮಹೋತ್ಸವವಿದೆ. ಈ ಜಾತ್ರೆಗೆ ಊರಿಗೆ ಹೊರಗೆ ಪೋಸ್ಟರ್ ಅಂಟಿಸಿ, ಜನ್ನಿ ಲಿಯೋನ್ ಬಾಯ್ಸ್ ಸಂಘದಿಂದ ಜಾತ್ರೆಗೆ ಬರುವ ಭಕ್ತರಿಗೆ ಸ್ವಾಗತ ಕೋರಿದ್ದಾರೆ.