ಚೌಡೇಶ್ವರಿ ಜಾತ್ರೆಯಲ್ಲಿ ಸನ್ನಿ ಲಿಯೋನ್ ‌ಬ್ಯಾನರ್ ಹಾಕಿ ಅಭಿಮಾನ ಮೆರೆದ ಹಾವೇರಿ ಬಾಯ್ಸ್

Public TV
1 Min Read
sunny l

ಬಾಲಿವುಡ್ (Bollywood) ಸ್ಟಾರ್ ಸನ್ನಿ ಲಿಯೋನ್‌ಗೆ (Sunny Leone) ಬಿಟೌನ್‌ನಲ್ಲಿ ಮಾತ್ರವಲ್ಲ ಕರ್ನಾಟರದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಪಡ್ಡೆ ಹುಡುಗರ ಪಾಲಿನ ಇಷ್ಟದೇವತೆಯಾಗಿರುವ ಸನ್ನಿ ಲಿಯೋನ್‌ಗೆ ಚೌಡೇಶ್ವರಿ ಜಾತ್ರೆಯಲ್ಲಿ (Chowdeshwari Jathre) ಹಾವೇರಿ ಯುವಕರು ವಿಶೇಷವಾಗಿ ಅಭಿಮಾನ ಮೆರೆದಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

sunny leone 3

ಸನ್ನಿ ಲಿಯೋನ್ (Sunny Leone) ಆರಾಧಿಸುವ ಅದೆಷ್ಟು ಯುವಕರಿಗೆ ನಟಿಯನ್ನ ಭೇಟಿಯಾಗಬೇಕು. ಸೆಲ್ಫಿ ತೆಗೆದುಕೊಳ್ಳಬೇಕು ಎಂಬ ಮಹಾದಾಸೆ ಇಟ್ಟುಕೊಂಡವರು ಅದೆಷ್ಟೋ ಮಂದಿ. ಹೀಗಿರುವಾಗ ದೇವಿಯ ಜಾತ್ರೆಯ ಜೊತೆಗೆ ಮನದರಸಿ ಇಷ್ಟದೇವತೆಗೂ ಕೂಡ ವಿಶೇಷವಾಗಿ ಅಭಿಮಾನ ತೋರಿದ್ದಾರೆ.

sunny 1

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ (Ranebennuru) ಶ್ರೀ ಗಂಗಾಜಲ ಚೌಡೇಶ್ವರಿ ಜಾತ್ರೆ ನಡೆಯುತ್ತಿದೆ. ಈ ವೇಳೆ ಕೆಲ ಹುಡುಗರು ಸನ್ನಿ ಲಿಯೋನ್ ಬ್ಯಾನರ್ ಹಾಕಿ ಫೋಟೋವನ್ನು ಅಳವಡಿಸಿದ್ದಾರೆ. ಸನ್ನಿ ಸೀರೆಯುಟ್ಟ ಫೋಟೋವನ್ನ ಬ್ಯಾನರ್‌ನಲ್ಲಿ ಮುದ್ರಿಸಲಾಗಿದೆ. ಬಡ ಮಕ್ಕಳ ಆಶಾ ಕಿರಣ ಸನ್ನಿ ಲಿಯೋನ್ ಅಭಿಮಾನಿಗಳ ಸಂಘ ಎಂದು ಬ್ಯಾನರ್‌ನಲ್ಲಿ ಹೈಲೈಟ್ ಮಾಡಲಾಗಿದೆ. ಇದನ್ನೂ ಓದಿ: ಅಕ್ಷಯ್‌ ಕುಮಾರ್‌ ನಟನೆಯ ಸಿನಿಮಾಗೆ ನಟ ಮಾಧವನ್‌ ಎಂಟ್ರಿ

sunny 2

ಈ ಹಿಂದೆ ಸನ್ನಿ ಹೆಸರಿನಲ್ಲಿ ರಕ್ತದಾನ ಮಾಡಿ ಮಂಡ್ಯ ಬಾಯ್ಸ್ ಸಖತ್ ಸುದ್ದಿಯಲ್ಲಿದ್ದರು. ಈಗ ರಾಣೆಬೆನ್ನೂರಿನ ಯುವಕರು ಸನ್ನಿಗೆ ವಿಶೇಷ ಅಭಿಮಾನ ತೋರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *