ಬಾಲಿವುಡ್ ಮಾತ್ರವಲ್ಲ ಪರಭಾಷೆಗಳಲ್ಲೂ ಮಿಂಚ್ತಿರುವ ಸನ್ನಿಲಿಯೋನ್‌ಗೆ ಬಂಪರ್ ಆಫರ್‌ವೊಂದು ಅರಸಿ ಬಂದಿದೆ. ಕೈತುಂಬಾ ಸಿನಿಮಾಗಳ ನಡುವೆ ಫಿಲ್ಮ್‌ಂ ಮೇಕರ್ ಅನುರಾಗ್ ಕಶ್ಯಪ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನ ಸನ್ನಿ ಗಿಟ್ಟಿಸಿಕೊಂಡಿದ್ದಾರೆ.
ಬಿಟೌನ್ ಹಾಟ್ ಬ್ಯೂಟಿ ಸನ್ನಿ ಲಿಯೋನ್, ಕನ್ನಡ, ತೆಲುಗು ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕಿಯಾಗಿ, ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕೋದ್ರಿಂದ ಹಿಡಿದು ಹಲವು ಬಗೆಯ ಪಾತ್ರಗಳ ಮೂಲಕ ಸನ್ನಿ ಗಮನ ಸೆಳೆದಿದ್ದಾರೆ. ಇದೀಗ ಅನುರಾಗ್ ಕಶ್ಯಪ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಟಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಟೈಗರ್ ಶ್ರಾಫ್ ಪ್ರೀತಿಯ ಬಗ್ಗೆ ಮೌನ ಮುರಿದ ಜಾಕಿ ಶ್ರಾಫ್

View this post on Instagram
ಇದೀಗ ಅನುರಾಗ್ ಕಶ್ಯಪ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಸನ್ನಿ ಲಿಯೋನ್‌ಗೆ ಅವಕಾಶ ಸಿಕ್ಕಿದೆ. ಸದ್ಯದಲ್ಲೇ ಚಿತ್ರದ ಕುರಿತು ಮತ್ತಷ್ಟು ಅಪ್‌ಡೇಟ್ ಸಿಗಲಿದೆ.


