– ರಾಕೆಟ್‌ನಲ್ಲಿ ನಾಲ್ವರು ಹೊಸ ಗಗನಯಾತ್ರಿಗಳು
ವಾಷಿಂಗ್ಟನ್: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ನಾಸಾ ಗಗನಯಾತ್ರಿಳಾದ ಸುನಿತಾ ವಿಲಿಯಮ್ಸ್ (Sunita Williams) ಮತ್ತು ಬುಜ್ ವಿಲ್ಮೋರ್ ಅವರನ್ನು ಭೂಮಿಗೆ ವಾಪಸ್ ಕರೆತರಲು ಸ್ಪೇಸ್‌ಎಕ್ಸ್‌ನ (SpaceX) ಫಾಲ್ಕನ್ 9 ರಾಕೆಟ್ ಉಡಾವಣೆ ಮಾಡಲಾಗಿದೆ.
ಭಾರತೀಯ ಕಾಲಮಾನದ ಪ್ರಕಾರ ಇಂದು ಮುಂಜಾನೆ ಸುಮಾರು 4:33 ಕ್ಕೆ ರಾಕೆಟ್ ಉಡಾವಣೆಗೊಂಡಿತು. ನಾಲ್ವರು ಹೊಸ ಗಗನಯಾತ್ರಿಗಳಿರುವ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಇರುವ ಫಾಲ್ಕನ್ 9 ರಾಕೆಟ್ (Falcon 9 Rocket) ಇದಾಗಿದೆ. ಇದನ್ನೂ ಓದಿ: ರೈಲು ಹೈಜಾಕ್‌ನಲ್ಲಿ ಸೆರೆಯಾಗಿದ್ದ ಎಲ್ಲಾ 214 ಒತ್ತೆಯಾಳುಗಳ ಸಾಮೂಹಿಕ ಹತ್ಯೆ: ಬಿಎಲ್‌ಎ ಹೇಳಿಕೆ
Have a great time in space, y’all!
#Crew10 lifted off from @NASAKennedy at 7:03pm ET (2303 UTC) on Friday, March 14. pic.twitter.com/9Vf7VVeGev
— NASA (@NASA) March 14, 2025
ಕ್ರೂ-10 ರ ಭಾಗವಾಗಿರುವ ನಾಲ್ವರು ಗಗನಯಾತ್ರಿಗಳು, ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿದಂತೆ ಕ್ರೂ-9 ಗಗನಯಾತ್ರಿಗಳನ್ನು ಬಿಡುಗಡೆ ಮಾಡಲಿದೆ. ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಸುನಿತಾ ವಿಲಿಯಮ್ಸ್ ಮತ್ತು ಬುಜ್ ಸಿಲುಕಿಕೊಂಡಿದ್ದಾರೆ. ಮುಂದಿನ ಬುಧವಾರಕ್ಕಿಂತ ಮುನ್ನ ವಾಪಸಾಗುವ ನಿರೀಕ್ಷೆ ಇದೆ.
2024 ರಲ್ಲಿ ಜೂನ್‌ಗೆ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ಸಮಸ್ಯೆಗಳಿಂದಾಗಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ISS ನಲ್ಲಿ ಸಿಲುಕಬೇಕಾಯಿತು. ಇದನ್ನೂ ಓದಿ: ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ – ನಾಲ್ವರಿಗೆ ಗಾಯ