ನವದೆಹಲಿ: ಬಾಹ್ಯಾಕಾಶಕ್ಕೆ ತೆರಳಿರುವ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಅವರ ಆರೋಗ್ಯ (Health) ಹದಗೆಟ್ಟಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಸ್ವತಃ ಸುನಿತಾ ವಿಲಿಯಮ್ಸ್ ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇತ್ತೀಚಿನ ಫೋಟೋಗಳ ಆಧಾರದ ಮೇಲೆ ಸುನೀತಾ ವಿಲಿಯಮ್ಸ್ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದೇ ರೀತಿಯಲ್ಲಿ ಅವರ ಫೋಟೋ ಕೂಡ ಬಿತ್ತರವಾಗಿದ್ದವು. ಈ ಬಗ್ಗೆ ವೀಡಿಯೋ ಸಂದರ್ಶನವೊಂದಕ್ಕೆ ಪ್ರತಿಕ್ರಿಯಿಸಿ ಬಾಹ್ಯಾಕಾಶ ನಿಲ್ದಾಣದಿಂದಲೇ (ISS) ಮಾತನಾಡಿರುವ ಅವರು, ತಮ್ಮ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪರಿಹಾರದ ಹಣ ನೀಡಲಿಲ್ಲ ಅಂತ ಎಸಿ ಕೂತಿದ್ದ ಚೇರನ್ನೇ ಹೊತ್ತೊಯ್ದ ಸಂತ್ರಸ್ತರು!
ನಾನು ಬಾಹ್ಯಾಕಾಶ ನಿಲ್ದಾಣಕ್ಕೆ ಬರುವಾಗ ಇದ್ದ ತೂಕವನ್ನೇ ಈಗಲೂ ಹೊಂದಿದ್ದೇನೆ. ಸ್ನಾಯು ಮತ್ತು ಮೂಳೆ ಸಾಂದ್ರತೆಯ ಮೇಲೆ ಮೈಕ್ರೊಗ್ರಾವಿಟಿಯ ಪರಿಣಾಮಗಳನ್ನು ಎದುರಿಸಲು ಗಗನಯಾತ್ರಿಗಳು ಅನುಸರಿಸುವ ಕಠಿಣ ವ್ಯಾಯಾಮದ ಕಟ್ಟುಪಾಡುಗಳಿಂದಾಗಿ ದೈಹಿಕ ರೂಪ ಬದಲಾಗಿದೆ. ಈ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ ಎಂದು ಸುನಿತಾ ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ
ಇದೇ ವೇಳೆ ತಮ್ಮ ದಿನನಿತ್ಯದ ವ್ಯಾಯಾಮದ ದಿನಚರಿಯನ್ನು ಕೂಡ ಅವರು ವಿವರಿಸಿದರು. ಬಾಹ್ಯಾಕಾಶ ನಿಲ್ದಾಣದಲ್ಲಿ ಬೈಕ್ ಸವಾರಿ, ಟ್ರೆಡ್‌ಮಿಲ್‌ನಲ್ಲಿ ಓಡುವುದು ಹಾಗೂ ವೇಟ್‌ಲಿಫ್ಟಿಂಗ್ ಮಾಡುತ್ತೇನೆ. ಈ ಚಟುವಟಿಕೆಗಳಿಂದ ನನ್ನ ದೇಹದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ನನ್ನ ತೊಡೆಗಳು ಸ್ವಲ್ಪ ದೊಡ್ಡದಾಗಿದೆ, ನನ್ನ ಪೃಷ್ಠವು ಸ್ವಲ್ಪ ದೊಡ್ಡದಾಗಿದೆ. ನಿರಂತರವಾಗಿ ವೇಟ್‌ಲಿಫ್ಟಿಂಗ್ ಮಾಡುತ್ತಿದ್ದ ಕಾರಣಕ್ಕೆ ಈ ಬದಲಾವಣೆ ಆಗಿದೆ ಎಂದಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಬ್ಯಾಗ್ ಗದ್ದಲದ ನಡುವೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಹೆಲಿಕಾಪ್ಟರ್ ತಪಾಸಣೆ