ಕಪಿಲ್ ಶೋನಲ್ಲಿ ಸುನಿಲ್: ಒಂದಾದ ಹೊಡೆದಾಡಿಕೊಂಡಿದ್ದ ಜೋಡಿ

Public TV
1 Min Read
The Great Indian Kapil Show 3

ಹಿಂದಿಯ ಕಪಿಲ್ ಶರ್ಮಾ (Kapil Sharma) ಶೋನಲ್ಲಿ ಅತೀ ಹೆಚ್ಚು ನಗಿಸೋರು ಯಾರು ಅಂದರೆ ಥಟ್ಟನೆ ಹೇಳುತ್ತಿದ್ದ ಹೆಸರು ಸುನಿಲ್ ಗ್ರೋವರ್ (Sunil Grover) ಅವರದ್ದು. ಕಾಮಿಡಿ ಶೋನಲ್ಲಿ ಅವರು ಮಾಡದೇ ಇರುವಂತಹ ಪಾತ್ರ ಇರಲಿಲ್ಲ. ಪ್ರತಿ ಎಪಿಸೋಡಿನಲ್ಲೂ ಒಂದಲ್ಲ ಒಂದು ಹೊಸ ವೇಷ ಧರಿಸಿಕೊಂಡು ಜನರನ್ನು ರಂಚಿಸುತ್ತಿದ್ದಾರೆ. 2018ರಲ್ಲಿ ನಡೆದ ಗಲಾಟೆಯಿಂದಾಗಿ ಶೋನಿಂದ ಸುನಿಲ್ ದೂರವಾದರು.

The Great Indian Kapil Show 2

ಕಾರ್ಯಕ್ರಮಕ್ಕೆಂದು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿತ್ತು ಕಪಿಲ್ ಅಂಡ್ ಟೀಮ್. ಅದರಲ್ಲು ಸುನಿಲ್ ಕೂಡ ಇದ್ದರು. ಕಾರ್ಯಕ್ರಮ ಮುಗಿಸಿಕೊಂಡು ದೆಹಲಿ ವಿಮಾನ ಏರಿದಾಗ ಅಲ್ಲಿಯೇ ಎಡವಟ್ಟು ಆಗಿತ್ತು. ಬಾಲಿವುಡ್ ನಲ್ಲಿ ಹರಿದಾಡಿದ ಸುದ್ದಿಯ ಪ್ರಕಾರ ಕಪಿಲ್ ಶರ್ಮಾ ವಿಪರೀತ ಕುಡಿದಿದ್ದರು. ಅದೇ ಗಲಾಟೆಗೆ ಕಾರಣವಾಗಿತ್ತು.

The Great Indian Kapil Show 4

ವಿಪರೀತ ಕುಡಿದಿದ್ದ ಕಪಿಲ್ ಶರ್ಮಾ, ಅಲ್ಲಿದ್ದವರನ್ನು ರೇಗಿಸುತ್ತಿದ್ದರು. ಅದು ಎಲ್ಲರಿಗೂ ಕಿರಿಕಿರಿ ಮೂಡಿಸಿತ್ತು. ಅದೇ ವೇಳೆಯಲ್ಲೇ ವಿಮಾನದಲ್ಲಿ ಊಟ ತಂದುಕೊಟ್ಟಿದ್ದರ ಸಿಬ್ಬಂದಿ. ಶರ್ಮಾ ಬಿಟ್ಟು ಉಳಿದವರು ಊಟ ಮಾಡಲು ಶುರು ಮಾಡಿದರು. ನಾನು ಊಟ ಮಾಡದೇ ನೀವು ಹೇಗೆ ಮಾಡಿದ್ದೀರಿ ಎಂದು ಕಿರಿಕ್ ಮಾಡಿದ್ದರು ಕಪಿಲ್. ಜಗಳಕ್ಕೆ ಬಿದ್ದು ಬಿಟ್ಟಿದ್ದರು.

The Great Indian Kapil Show 1

ಜಗಳ ವಿಪರೀತಕ್ಕೆ ಹೋಗಬಾರದು ಎನ್ನುವ ಕಾರಣಕ್ಕಾಗಿ ಸುನಿಲ್, ನಡುವೆ ಬಂದು ಕಪಿಲ್ ಅವರನ್ನು ಸಮಾಧಾನಿಸಲು ಹೋದರಂತೆ. ಆದ ಸುನಿಲ್ ಅವರಿಗೆ ಬೂಟು ತೆಗೆದುಕೊಂಡು ಕಪಿಲ್ ಹೊಡೆದರು. ಅಲ್ಲಿಂದ ಈ ಗೆಳೆಯರು ಇಬ್ಬರೂ ದೂರ ದೂರ ಆದರು ಎನ್ನುವುದು ಸುದ್ದಿ. ಅಲ್ಲಿಂದ ಆರು ವರ್ಷಗಳ ಕಾಲ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳಲಿಲ್ಲ.

 

ಸುನಿಲ್ ತಮ್ಮದೇ ಆದ ಹೊಸ ಕಾಮಿಡಿ ಶೋ ಶುರು ಮಾಡಿದಾಗ, ಕಪಿಲ್ ಕಾಲೆಳೆದರು. ಹೀಗೆ ಪರಸ್ಪರ ಇಬ್ಬರೂ ದ್ವೇಷ ಮಾಡುತ್ತಲೇ ಬಂದಿದ್ದರು. ಇದೀಗ ಕಪಿಲ್ ಅವರ ಹೊಸ ಕಾಮಿಡಿ ಶೋನಲ್ಲಿ ಈ ಕೆಂಡಕಾರಿದ್ದ ಜೋಡಿ ಜೊತೆಯಾಗಿ ನಗಿಸೋಕೆ ಬರುತ್ತದೆ. ಒಟಿಟಿಗಾಗಿ ಮಾಡಿರುವ ಶೋಗೆ ‘ದಿ ಗ್ರೇಟ್ ಇಂಡಿನ್ ಕಪಿಲ್ ಶೋ’ ಎಂದು ಹೆಸರಿಟಲಾಗಿದೆ. ಆಗಲೇ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ.

Share This Article