ಕೋಲ್ಕತ್ತಾ: 2019ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಪಾದಾರ್ಪಣೆ ಮಾಡಿದ ವರುಣ್ ಚಕ್ರವರ್ತಿ ಮೊದಲ ಓವರಿನಲ್ಲೇ 25 ರನ್ ನೀಡಿ ದುಬಾರಿ ಬೌಲಿಂಗ್ ಮಾಡಿದ್ದಾರೆ.
ವರುಣ್ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯ ಇದಾಗಿದ್ದು, ಇನ್ನಿಂಗ್ಸ್ ನ 2ನೇ ಓವರ್ ಬೌಲ್ ಮಾಡಲು ಅವಕಾಶ ಪಡೆದಿದ್ದರು. ಸ್ಟ್ರೈಕ್ ನಲ್ಲಿದ್ದ ಕೆಕೆಆರ್ ತಂಡದ ಸುನೀಲ್ ನರೇನ್ ಭರ್ಜರಿ ಬೌಂಡರಿ, ಸಿಕ್ಸರ್ ಗಳೊಂದಿಗೆ 25 ರನ್ ಸಿಡಿಸಿದ್ದಾರೆ.
A poor start, but Varun Chakravarthy did show signs of improvement by slowing it up https://t.co/aei3oGqt8V #KKRvKXIP #IPL2019 pic.twitter.com/UZvetLmNuM
— ESPNcricinfo (@ESPNcricinfo) March 27, 2019
27 ವರ್ಷದ ವರುಣ್ ಕರ್ನಾಟಕದ ಬೀದರ್ ನಲ್ಲಿ 1991 ರಲ್ಲಿ ಜನಿಸಿದ್ದು, ತಮಿಳುನಾಡಿನ ಪರ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ವರುಣ್ ರನ್ನು 8.4 ಕೋಟಿಗೆ ಕಿಂಗ್ಸ್ ಇಲೆವೆನ್ ಖರೀದಿ ಮಾಡಿತ್ತು.
ತಮಿಳುನಾಡು ಟಿ20 ಲೀಡ್, ಟಿಎನ್‍ಪಿಎಲ್ ನಲ್ಲಿ ಉತ್ತಮ ಅವಕಾಶ ಪಡೆದಿದ್ದರು. ಒಟ್ಟು 7 ಪಂದ್ಯಗಳಲ್ಲಿ 31 ವಿಕೆಟ್ ಕಬಳಿಸಿದ್ದರು. ಟೂರ್ನಿಯಲ್ಲಿ 4 ಓವರ್ ಗಳಲ್ಲಿ 28 ರನ್ ಮಾತ್ರ ನೀಡಿದ್ದರು. ಅಲ್ಲದೇ ವಿಜಯ್ ಹಜಾರೆ ಟ್ರೋಫಿಯಲ್ಲೂ 22 ವಿಕೆಟ್ ಕಬಳಿಸಿದ್ದರು. ಐಪಿಎಲ್ ಆರಂಭ 1 ಓವರಿನಲ್ಲೇ 25 ರನ್ ನೀಡಿ ನಿರಾಸೆ ಅನುಭವಿಸಿದರು. ಆದರೆ ಇದೇ ಪಂದ್ಯದಲ್ಲಿ ಮತ್ತೆ ತಿರುಗೇಟು ನೀಡಿದ ವರುಣ್ ತಮ್ಮ 3ನೇ ಓವರಿನಲ್ಲಿ ಕೇವಲ 1 ರನ್ ನೀಡಿ ವಿಕೆಟ್ ಕಬಳಿಸಿ ತಿರುಗೇಟು ನೀಡಿದರು. ಅಂತಿಮವಾಗಿ 3 ಓವರ್ ಗಳಲ್ಲಿ 35 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.
Match 6. 14.3: WICKET! N Rana (63) is out, c Mayank Agarwal b Varun Chakravarthy, 146/3 https://t.co/xuMescCuS1 #KKRvKXIP #VIVOIPL
— IndianPremierLeague (@IPL) March 27, 2019