MES ಪುಂಡರಿಗೆ ತಕ್ಕ ಶಾಸ್ತಿ ಆಗಲಿದೆ: ಸುನಿಲ್ ಕುಮಾರ್

Public TV
1 Min Read
sunil kumar

ಉಡುಪಿ: ಎಂಇಎಸ್ ಪುಂಡರಿಗೆ ತಕ್ಕ ಶಾಸ್ತಿ ಆಗಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

MES

ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿ ಎಂಇಎಸ್ ಪುಂಡಾಟಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳದಲ್ಲಿ ಮಾತನಾಡಿದ ಅವರು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ವೇಳೆ ಇಂತಹ ಘಟನೆ ಮುಂದೆ ಮರುಕಳಿಸಲು ಬಿಡುವುದಿಲ್ಲ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಕಪ್ಪು ಬಟ್ಟೆ ಮೇಲೆ MES ಎಂದು ಬರೆದು ಚಪ್ಪಲಿ ಏಟು ಕೊಟ್ಟ ರಾಯಣ್ಣನ ಅಭಿಮಾನಿಗಳು

kannada flag

ಕನ್ನಡ ಧ್ವಜವನ್ನು ಸುಟ್ಟ ಕುರಿತು ಮಾತನಾಡಿದ ಅವರು, ಈ ರೀತಿಯ ಕೃತ್ಯ ಯಾರೂ ಮಾಡದಂತೆ ಸೂಕ್ತ ಬಂದೋ ಬಸ್ತ್ ಮಾಡಲಾಗುವುದು. ಕರ್ನಾಟಕದಲ್ಲಿ ಇರುವ ಎಲ್ಲರಿಗೂ ಕನ್ನಡ ಭಾಷೆ, ಸಾಹಿತ್ಯ, ಧ್ವಜದ ಬಗ್ಗೆ ಅಪಾರವಾದ ಗೌರವ ಇರಲೇಬೇಕು ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲಿ ಅನ್ಯಭಾಷೆ ಮಾತನಾಡುವ ಲಕ್ಷಾಂತರ ಜನ ಇದ್ದಾರೆ. ಅವರಿಗೆ ಕನ್ನಡದ ಬಗ್ಗೆ ಗೌರವ ತೋರಿಸುವುದು ನಮ್ಮ ಕರ್ತವ್ಯ. ಇತ್ತೀಚೆಗೆ ಕೆಲ ದುಷ್ಕರ್ಮಿಗಳು ಕನ್ನಡ ಬಾವುಟಕ್ಕೆ ಹಾನಿ ಮಾಡಿದ್ದಾರೆ. ಕನ್ನಡದ ವಿರುದ್ಧ ಅಗೌರವ ತೋರಿಸುವುದನ್ನು ನಾವು ಸಹಿಸುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

Share This Article