ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವ ಆಲೋಚನೆ ಇಲ್ಲ: ಸುನಿಲ್‍ ಕುಮಾರ್

Public TV
1 Min Read
sunil kumar

ಬಾಗಲಕೋಟೆ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವ ಆಲೋಚನೆ ಸರ್ಕಾರದ ಮುಂದಿಲ್ಲ ಎಂದು ಇಂಧನ ಸಚಿವ ವಿ. ಸುನಿಲ್‍ಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದು ಮೂರು ದಿನಗಳಿಂದ ರಾಜ್ಯದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ, ಬೇಡಿಕೆ ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗಿದೆ. ಐಟಿ ಸೆಕ್ಟರ್‌ನ ಒತ್ತಡಗಳು ಕಡಿಮೆಯಾಗಿವೆ. ಆ ಹಿನ್ನೆಲೆಯಲ್ಲಿ ರಾಯಚೂರಿನ ಎರಡ್ಮೂರು ಯುನಿಟ್‍ಗಳನ್ನ ಕಡಿಮೆ ಮಾಡಿದ್ದೇವೆ ವಿನಃ ಕಲ್ಲಿದ್ದಲು ಕೊರತೆ ಕಾರಣಕ್ಕೆ ಕಡಿಮೆ ಮಾಡಿಲ್ಲ. ರಾಜ್ಯದ ಜನ ಯಾವುದೇ ರೀತಿಯ ತಪ್ಪು ಅಭಿಪ್ರಾಯಗಳಿಗೆ ಹೋಗೋದು ಬೇಡ ಎಂದು ತಿಳಿಸಿದರು.

ANE current shock

ಲೋಡ್‍ಶೆಡ್ಡಿಂಗ್ ಮಾಡಲ್ಲ. ನಿರಂತರವಾಗಿ ವಿದ್ಯುತ್ ನೀಡಲಾಗುತ್ತದೆ. ಮಳೆಗಾಲದಲ್ಲಿ ಎಲ್ಲೋ ಒಂದು ಸಣ್ಣಪುಟ್ಟ ಅಡಚನೆಗಳಾದರೆ ತಕ್ಷಣ ಸರಿಪಡಿಸುವ ಕಾರ್ಯವನ್ನು ಇಲಾಖೆ ಸಿಬ್ಬಂದಿ ಮಾಡುತ್ತಾರೆ. ವಿದ್ಯುತ್ ಇಲಾಖೆ ಕುರಿತಂತೆ ರಾಜ್ಯದಲ್ಲಿ ಗ್ರಾಹಕ ಸ್ನೇಹಿಯಾದ ಇಲಾಖೆ ಆಗುವ ಪ್ರಯತ್ನ ನಡೆದಿದೆ ಎಂದರು. ಮಠಕ್ಕೆ ನಾನು ಸಿಎಂ ಆಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ: ಬೊಮ್ಮಾಯಿ

ಗಲಭೆ ಸಹಿಸಲ್ಲ: ಪಿಎಫ್‍ಐ ಸಂಘಟನೆ ಅಪರಾಧಿಗಳನ್ನು ಸಿದ್ದರಾಮಯ್ಯ ಸರ್ಕಾರ ಒಂದು ಸಾವಿರ ಜನರ ಕೇಸ್‍ಗಳನ್ನು ವಾಪಸ್ಸು ಪಡೆಯಲಾಯಿತು. ಅಂದು ಬಿತ್ತಿದ ವಿಷಬೀಜ ಇವತ್ತು ಹೆಮ್ಮರವಾಗಿ ಬೆಳೆದಿದೆ. ಇಂತ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆದುಕೊಳ್ಳುವ ಪ್ರಶ್ನೆ ಈ ಸರ್ಕಾರಕ್ಕೆ ಇಲ್ಲವೇ ಇಲ್ಲ. ಇದನ್ನು ಬಗ್ಗು ಬಡಿಯುತ್ತೇವೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಹಿತಕರ ಘಟನೆ ನಡೆದರೆ ಸಹಿಸಲ್ಲ ಎಂದರು.

Siddaramaiah

ಮುಂದಿನ ದಿನಗಳಲ್ಲಿ ಶಾಂತಿಗೆ ಸಹಕರಿಸ್ತಿರೋ? ಬುಲ್ಡೋಜರ್‌ಗೆ ಸಹಕರಿಸ್ತಿರೋ ಎನ್ನುವವರು ಗಲಿಭೆ ಸೃಷ್ಟಿಸುವವರು ತಿಳಿದುಕೊಳ್ಳಬೇಕು. ಅದು ಅವರಿಗೆ ಬಿಟ್ಟಿದ್ದು ಎಂದು ಅಲ್ಪಮತೀಯ ಸಂಘಟನೆಗಳಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬನಾಸ್ ಡೈರಿಯಲ್ಲಿನ ಉಪಕ್ರಮಗಳು ರೈತರನ್ನು ಸಬಲಗೊಳಿಸುತ್ತದೆ: ಪ್ರಧಾನಿ ಮೋದಿ

hbl 3

ಹುಬ್ಬಳ್ಳಿ ಘಟನೆಯನ್ನು ನಮ್ಮ ಅಧಿಕಾರಿಗಳು 24 ಗಂಟೆಯೊಳಗೆ ಹದ್ದುಬಸ್ತಿಗೆ ತಂದಿದ್ದಾರೆ. ಮಂಗಳೂರು, ಬೆಂಗಳೂರು ಘಟನೆಗಳಲ್ಲಿ ಯಾರೋ ಒಂದಷ್ಟು ಜನ ಉದ್ದೇಶಪೂರ್ವಕ ಅಶಾಂತಿ ಸೃಷ್ಟಿ ಮಾಡುವ ಪ್ರಯತ್ನ ನಡಿತಿದೆ. ಈ ಸರ್ಕಾರ ಕೈಕಟ್ಟಿ ಕೂತಿಲ್ಲ. 24 ಗಂಟೆಯಲ್ಲಿ 100 ಜನರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದೇವೆ. ಶಾಂತಿ ಕದಡದಂತೆ ಎಚ್ಚರಿಕೆ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *