ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಸಲದ ಕರ್ನಾಟಕ ರಾಜ್ಯೋತ್ಸವದ (Kannada Rajyotsava) ಅಂಗವಾಗಿ ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಒಂದು ಕೋಟಿ ಜನರು ಭಾಗವಹಿಸ್ತಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಹೊಸ ಸುದ್ದಿ ಏನಂದ್ರೆ, ಈಗಾಗಲೇ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರೋಬ್ಬರಿ 1.10 ಕೋಟಿಯಷ್ಟು ಜನರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನಸ್ಪಂದನೆ ವ್ಯಕ್ತವಾಗಿದೆ.
ದೇಶ- ವಿದೇಶಗಳಿಂದ ಈ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಕನ್ನಡಿಗರು ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಅ. 28ರಂದು ಕೋಟಿ ಕಂಠಗಳಲ್ಲಿ ಕನ್ನಡದ (Kannada) ವೃಂದ ಗಾಯನ ಮೊಳಗಿ ದಾಖಲೆ ಸೃಷ್ಟಿಯಾಗಲಿದೆ. ಈ ಕಾರ್ಯಕ್ರಮ ನಿಮಿತ್ತ ಇಲಾಖೆ ವತಿಯಿಂದ ಪ್ರತ್ಯೇಕ ಕ್ಯೂ ಆರ್ ಕೋಡ್ ಆರಂಭಿಸಲಾಗಿದೆ. ಇದರಲ್ಲಿ 29 ರಾಜ್ಯಗಳು ಹಾಗೂ 25 ರಾಷ್ಟ್ರಗಳಿಂದ ಕನ್ನಡ ಪ್ರೇಮಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಈ ಕ್ಯೂ ಆರ್ ಕೋಡ್ನಲ್ಲಿ 1.10 ಕೋಟಿ ಹೆಸರು ನೋಂದಣಿಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಈ ಸಂಖ್ಯೆ 1.50 ಕೋಟಿ ಮೀರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ (V Sunil Kumar) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಕಾರ್ಯಕ್ರಮದ ನಿಮಿತ್ತ ಸಚಿವ ಸುನಿಲ್ಕುಮಾರ್ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಸಭೆಗಳು ನಡೆದಿವೆ. ಆಟೋ ಚಾಲಕರ ಸಂಘ, ಮಹಿಳಾ ಸ್ವಸಹಾಯ ಸಂಘ, ಸಹಕಾರಿ ಬ್ಯಾಂಕ್, ಗ್ರಾಮ ಪಂಚಾಯಿತಿ, ಐಟಿಬಿಟಿ ಉದ್ಯೋಗಿಗಳು, ವಿಶ್ವವಿದ್ಯಾಲಯ, ಶಾಲಾ- ಕಾಲೇಜು, ಚಾಲಕ ಸಂಘ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಸಂಘಟನೆಗಳ ಜತೆಗೆ ಸಚಿವರು ಖುದ್ದು ಸಭೆ ನಡೆಸಿದ್ದಾರೆ.
Advertisement
ಅ. 28ರಂದು ಬೆಳಗ್ಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು (Kuvempu) ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಡಾ.ಚನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ ಹಾಗೂ ಡಾ. ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ 6 ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗುತ್ತದೆ. ಇದನ್ನೂ ಓದಿ: ಪ್ಲ್ಯಾನ್ ಮಾಡಿಯೇ ಮಳವಳ್ಳಿಯ ಬಾಲಕಿಯನ್ನು ರೇಪ್ ಮಾಡಿದ್ದ ಆರೋಪಿ ಕಾಂತರಾಜು
Advertisement
ರಾಜ್ಯ, ಗಡಿನಾಡು, ಸಾಗರೋತ್ತರ ಹೊರತುಪಡಿಸಿ ರಾಜ್ಯದ ಹದಿನೈದು ಸ್ಥಳಗಳಲ್ಲಿ ವಿಶೇಷ ಕಾರ್ತಕ್ರಮ ಆಯೋಜಿಸಲಾಗಿದೆ. ವಿಧಾನಸೌಧದ ಮೆಟ್ಟಿಲು, ಗಾಂಧಿ ಪ್ರತಿಮೆ, ಹೈಕೋರ್ಟ್, ಕಂಠೀರವ ಕ್ರೀಡಾಂಗಣ, ವಿಮಾನ, ರೈಲು, ಚಿತ್ರದುರ್ಗದ ಕೋಟೆ, ಕಡಲ ತೀರಗಳಲ್ಲಿ ಕನ್ನಡದ ಗೀತೆ ಮೊಳಗಲಿದೆ. ಇದನ್ನೂ ಓದಿ: ನೋಟುಗಳ ಮೇಲೆ ಲಕ್ಷ್ಮಿ, ಗಣೇಶನ ಫೋಟೋವನ್ನು ಮುದ್ರಿಸಿ – ಮೋದಿಗೆ ಕೇಜ್ರಿವಾಲ್ ಮನವಿ