ಬೆಂಗಳೂರು: ಮದ್ಯದಲ್ಲಿ ಮಾದಕ ವಸ್ತು ನೀಡಿ 21 ವರ್ಷದ ಯುವತಿಯ ಮೇಲೆ ಅತ್ಯಾಚಾರ (Karkala Rape Case) ನಡೆಸಿರುವ ಕುರಿತು ಕಾರ್ಕಳದ ಶಾಸಕ ವಿ ಸುನೀಲ್ ಕುಮಾರ್ (Sunil Kumar) ತೀವ್ರವಾಗಿ ಖಂಡಿಸಿದ್ದಾರೆ. ಈ ವೇಳೆ ಅನ್ಯಕೋಮಿ ಯುವಕರು ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಇಂಥ ಘಟನೆಗಳು ಪುನರಾವರ್ತನೆ ಆಗ್ತಿರೋದು ಆತಂಕಕಾರಿ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:Karkala | ಮದ್ಯದಲ್ಲಿ ಮಾದಕ ವಸ್ತು ನೀಡಿ ಅತ್ಯಾಚಾರ – ಗ್ಯಾಂಗ್‌ರೇಪ್ ಶಂಕೆ?
ಅನ್ಯಕೋಮಿ ಯುವಕರು ಯುವತಿಯರ ಮೇಲೆ ಅತ್ಯಾಚಾರ ಮಾಡಿರೋದು ಅತ್ಯಂತ ಪೈಶಾಚಿಕ ಕೃತ್ಯ ಆಗಿದೆ. ಉಗ್ರ ಶಬ್ಧಗಳಲ್ಲಿ ಇದನ್ನು ಖಂಡಿಸುತ್ತೇನೆ. ಅಮಲು ಪದಾರ್ಥ ನೀಡಿ ಆ ಯುವಕರು ಅತ್ಯಾಚಾರ ಮಾಡಿದ್ದಾರೆ ಅಂತ ಅವರ ತಾಯಿ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ದಿಟ್ಟ ಕ್ರಮ ತೆಗೆದುಕೊಂಡು ತನಿಖೆ ನಡೆಸಬೇಕು ಎಂದು ಶಾಸಕ ವಿ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ನಾಗರೀಕ ಸಮಾಜ ಇಂಥ ಕೃತ್ಯವನ್ನು ಎಂದಿಗೂ ಒಪ್ಪುವುದಿಲ್ಲ. ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಇಂಥ ಘಟನೆಗಳು ಪುನರಾವರ್ತನೆ ಆಗ್ತಿರೋದು ಆತಂಕಕಾರಿ. ಇದೊಂದು ಪೂರ್ವ ಯೋಜಿತವಾಗಿ ರೂಪಿಸಿರುವ ಕೃತ್ಯ ಅನಿಸುತ್ತದೆ. ಯುವತಿಯರನ್ನು ಸಂಜೆ ಮಾತಾನಾಡಿ ಆ ನಂತರ ಅಪಹರಣ ಮಾಡಿರೋದು ಪೂರ್ವ ಯೋಜಿತ ಪ್ಲ್ಯಾನ್. ಈ ಘಟನೆ ಇದೀಗ ಲವ್ ಜಿಹಾದ್‌ಗೆ ಈ ಘಟನೆ ತಳುಕು ಹಾಕಿಕೊಳ್ಳುತ್ತಿದೆ ಎಂದರು.
ಯುವತಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಧೈರ್ಯ ತುಂಬವ ಕೆಲಸ ಮಾಡಬೇಕು. ಅತ್ಯಾಚಾರಿ ಗ್ಯಾಂಗ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇನ್ಮುಂದೆ ಇಂಥ ಘಟನೆಗಳು ನಡೆಯದಂತೆ ಎಲ್ಲ ಎಚ್ಚರಿಕೆಗಳನ್ನೂ ಪೊಲೀಸ್ ಇಲಾಖೆ ಕೈಗೊಳ್ಳಬೇಕು. ಯುವತಿಯ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಭರಿಸಬೇಕು. ಲವ್ ಜಿಹಾದ್ ವಿಚಾರವಾಗಿ ಬಹಳ ದೊಡ್ಡ ಕಾರ್ಯಕ್ರಮ ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಬಹಳ ದೊಡ್ಡ ಅಭಿಯಾನ ಕೈಗೊಳ್ಳುತ್ತದೆ ಎಂದು ಹೇಳಿದರು.