ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ಎಂಬ ಥ್ರಿಲ್ಲರ್ ಸಿನಿಮಾಗಳ ಮಾಸ್ಟರ್ ಮತ್ತೆ ಮೋಡಿ ಮಾಡಲು ತಯಾರಾಗಿದ್ದಾರೆ. ಅವರು ಬಹು ಕಾಲದ ನಂತರ ನಿರ್ದೇಶನ ಮಾಡಿರೋ ರೋಚಕ ಥ್ರಿಲ್ಲರ್ ಕಥೆಯ ಉದ್ಘರ್ಷ ಚಿತ್ರ ಇದೇ ಮಾರ್ಚ್ 22ರಂದು ಬಿಡುಗಡೆಗೆ ರೆಡಿಯಾಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು ಸೇರಿದಂತೆ ಐದೈದು ಭಾಷೆಗಳಲ್ಲಿ ಏಕಕಾಲದಲ್ಲಿಯೇ ಬಿಡುಗಡೆಯಾಗಲಿರೋ ಈ ಸಿನಿಮಾ ಮೂಲಕ ದೇಸಾಯಿ ಭರ್ಜರಿ ಗೆಲುವು ದಾಖಲಿಸೀ ಸಕಾರಾತ್ಮಕ ಲಕ್ಷಣಗಳೇ ಮಿರುಗುತ್ತಿವೆ.
ಸುನೀಲ್ ಕುಮಾರ್ ದೇಸಾಯಿ ಎಂಬ ಹೆಸರು ಕೇಳಿದರೇನೇ ಥ್ರಿಲ್ಲರ್ ಕಥಾನಕಗಳ ಚಿತ್ರಗಳೆಲ್ಲ ಕಣುಂದೆ ಚಲಿಸಲಾರಂಭಿಸುತ್ತವೆ. ಎಂಭತ್ತರ ದಶಕದಲ್ಲಿಯೇ ಥ್ರಿಲ್ಲರ್ ಕಥೆಗಳ ರುಚಿ ಹತ್ತಿಸಿದ್ದ ದೇಸಾಯಿ ಇದೀಗ ಉದ್ಘರ್ಷ ಚಿತ್ರದ ಮೂಲಕ ಈ ಜನರೇಷನ್ನಿನ ಪ್ರೇಕ್ಷಕರನ್ನೂ ಆವರಿಸಿಕೊಳ್ಳಲು ತಯಾರಾಗಿದ್ದಾರೆ.
ಉದ್ಘರ್ಷದ ಅಸಲೀ ಆವೇಗ ಎಂಥಾದ್ದೆಂಬುದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಟ್ರೈಲರ್ ಗಿಂತ ಬೇರೆ ಪುರಾವೆ ಬೇಕಿಲ್ಲ. ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿ ನೀಡಿರೋ ಈ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದರು. ಹಾಗೆ ಬಿಡುಗಡೆಯಾದ ಕ್ಷಣಾರ್ಧದಿಂದಲೇ ಇದು ಸದ್ದು ಮಾಡಿದ ರೀತಿ ಕಂಡು ಬೇರೆ ಭಾಷೆಗಳ ಚಿತ್ರರಂಗದಲ್ಲಿಯೂ ಅಚ್ಚರಿ ಮನೆ ಮಾಡಿತ್ತು.
ಹೀಗೆ ಮೂಡಿಕೊಂಡಿರೋ ಎಲ್ಲ ಕುತೂಹಲಗಳನ್ನೂ ತೃಪ್ತಗೊಳಿಸುವಂತೆ ಉದ್ಘರ್ಷ ಮೂಡಿ ಬಂದಿದೆಯೆಂಬ ಭರವಸೆ ದೇಸಾಯಿಯವರದ್ದು. ಇಲ್ಲಿನ ದೃಶ್ಯಾವಳಿಗಳನ್ನು ಕ್ಷಣ ಕ್ಷಣವೂ ಚಿತ್ರ ವಿಚಿತ್ರ ತಿರುವುಗಳಿಂದ ಬೆಚ್ಚಿ ಬೀಳಿಸುವಂತೆ ದೇಸಾಯಿ ರೂಪಿಸಿದ್ದಾರಂತೆ. ಕೇವಲ ಥ್ರಿಲ್ಲರ್ ಕಥೆ ಮಾತ್ರವಲ್ಲ, ತಾಂತ್ರಿಕವಾಗಿಯೂ ಕೂಡಾ ಉದ್ಘರ್ಷ ಹೊಸಾ ಅನುಭವಗಳನ್ನೇ ಪ್ರೇಕ್ಷಕರಿಗೆ ನೀಡಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv