ಕೋಲ್ಕತ್ತಾ: ಭಾರತದ ಫುಟ್ ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಬಹುಕಾಲದ ಸ್ನೇಹಿತೆ ಸೋನಮ್ ಭಟ್ಟಚಾರ್ಯ ಜೊತೆ ಸೋಮವಾರ ಕೋಲ್ಕತ್ತಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸಿ ನವದಂಪತಿಗೆ ಮೊದಲು ಶುಭಹಾರೈಸಿದರು. ರಾಜಕೀಯ, ಸಿನಿಮಾ, ಫುಟ್ ಬಾಲ್ ಹಾಗೂ ಇತರೆ ಕ್ರೀಡಾ ಸೆಲೆಬ್ರಿಟಿಗಳು ಆಗಮಿಸಿದ್ದರು.
Advertisement
Advertisement
ನೇಪಾಳದ ಸಾಂಸ್ಕೃತಿಕ ಉಡುಗೆಯನ್ನು ಧರಿಸಿ ಅದ್ದಕ್ಕೆ ಪೇಟಾ ಹಾಕಿ ಕುದುರೆ ಮೇಲೆ ಸವಾರಿ ಮಾಡಿಕೊಂಡು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ನಂತರ ಬಂಗಾಳದ ಸಾಂಸ್ಕೃತಿಕ ಉಡುಗೆಯನ್ನು ಧರಿಸಿದ್ದರು. ನವೆಂಬರ್ ತಿಂಗಳಲ್ಲಿ ಈ ಜೋಡಿ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿತ್ತು.
Advertisement
ಸದ್ಯ ಚೆಟ್ರಿ ಈಗ ಇಂಡಿಯನ್ ಸೂಪರ್ ಲೀಗ್ ಅಲ್ಲಿ ಬೆಂಗಳೂರು ಎಫ್‍ಸಿ ತಂಡದ ನಾಯಕರಾಗಿದ್ದಾರೆ. ಮದುವೆ ನಂತರ ಡಿಸೆಂಬರ್ 8ರಂದು ನಾರ್ಥ್ ಈಸ್ಟ್ ಯುನೈಟೆಡ್ ತಂಡದ ಜೊತೆ ಗುವಾಹಟಿಯಲ್ಲಿ ಪಂದ್ಯ ನಡೆಯಲಿದ್ದು, ಚೆಟ್ರಿ ಯಾವುದೇ ರಜೆಗಳನ್ನು ತೆಗೆದುಕೊಳ್ಳುತ್ತಿಲ್ಲ. ನವೆಂಬರ್ 19ರಂದು ಮುಂಬೈ ಸಿಟಿ ಜೊತೆ ಬೆಂಗಳೂರು 2-0 ಅಂತರದಲ್ಲಿ ಜಯ ಸಾಧಿಸಿತ್ತು. ಆ ನಂತರದ ಪಂದ್ಯದಲ್ಲಿ ಎಫ್‍ಸಿ ಗೋವಾ ವಿರುದ್ಧ ಸೋಲು ಕಂಡಿತ್ತು.