ನಟ ಸುನೀಲ್ ಶೆಟ್ಟಿ (Suniel Shetty) ನಟನೆಯ ‘ಕೇಸರಿ ವೀರ್ ಲೆಜೆಂಡ್ಸ್ ಆಫ್ ಸೋಮನಾಥ’ ಚಿತ್ರದ ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ (Pahalgam Terror Attack) ಕುರಿತು ಸುನೀಲ್ ಮಾತನಾಡಿದ್ದಾರೆ. ಭಯೋತ್ಪಾದಕರು ಎಂದಿಗೂ ಕಾಶ್ಮೀರದ ಪ್ರಗತಿ ನೋಡಲು ಬಯಸುವುದಿಲ್ಲ ಎಂದು ಸುನೀಲ್ ಶೆಟ್ಟಿ ಟೀಕಿಸಿದ್ದಾರೆ. ಇದನ್ನೂ ಓದಿ:ದರ್ಶನ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ- ವಾವ್ ಎಂದ ಫ್ಯಾನ್ಸ್
ಕಾರ್ಯಕ್ರಮದಲ್ಲಿ ಸುನೀಲ್ ಶೆಟ್ಟಿ ಮಾತನಾಡಿ ‘ಆರ್ಟಿಕಲ್ 370’ ರದ್ಧತಿಯ ಬಳಿಕ ಕಾಶ್ಮೀರದ ಏಳಿಗೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಭಯೋತ್ಪಾದಕರು ಎಂದಿಗೂ ಕಾಶ್ಮೀರದ ಪ್ರಗತಿ ನೋಡಲು ಬಯಸುವುದಿಲ್ಲ ಎಂದಿದ್ದಾರೆ. ಕಾಶ್ಮೀರವನ್ನು ಸುಧಾರಣೆ ಮಾಡಲು ಕಠಿಣ ಕ್ರಮ ಕೈಗೊಂಡಿದ್ದಕ್ಕೆ ಭಾರತ ಸರ್ಕಾರವನ್ನು ನಟ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಉಗ್ರರ ದಾಳಿ ಖಂಡಿಸಿದ ಶ್ರೀನಿಧಿ ಶೆಟ್ಟಿ
View this post on Instagram
‘ಕೇಸರಿ ವೀರ್ ಲೆಜೆಂಡ್ಸ್ ಆಫ್ ಸೋಮನಾಥ’ ಚಿತ್ರವನ್ನು (Kesari Veer: Legends of Somnath) ಕಾಶ್ಮೀರ ಪ್ರಗತಿಯನ್ನು ಬಯಸದೇ ಇರೋರ ಬಗ್ಗೆ ಹೋಲಿಸಿದ್ದಾರೆ. ಧರ್ಮ, ಕರ್ಮ, ಸೇವೆಯ ಬಗ್ಗೆ ಈ ಸಿನಿಮಾ ಹೇಳುತ್ತದೆ ಎಂದಿದ್ದಾರೆ. ನಾವು ಒಗಟ್ಟಿನಿಂದ ಇರಬೇಕು. ನಾವು ಭಾರತೀಯರು ಒಟ್ಟಾಗಿ ನಿಲ್ಲಬೇಕು. ಇದನ್ನೇ ನಮ್ಮ ಚಿತ್ರದ ಸಂದೇಶ ನೀಡುತ್ತದೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
‘ಕೇಸರಿ ವೀರ್ ಲೆಜೆಂಡ್ಸ್ ಆಫ್ ಸೋಮನಾಥ’ ಚಿತ್ರದಲ್ಲಿ ಸುನೀಲ್ ಶೆಟ್ಟಿ ಜೊತೆ ವಿವೇಕ್ ಒಬೆರಾಯ್, ಸೂರಜ್ ಪಾಂಚೋಲಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಮೇ 16ರಂದು ಈ ಸಿನಿಮಾ ರಿಲೀಸ್ ಆಗಲಿದೆ.