ರವಿವಾರ ಬಂತು ಅಂದ್ರೆ ನಾನ್ ವೆಜ್ ಪ್ರಿಯರಿಗೆ ಏನಾದರೂ ಖಾರಖಾರವಾಗಿ ತಿನ್ನಬೇಕು ಅನಿಸುವುದು ಸಹಜ. ಅದೇ ರೀತಿ ಈಗಿನ ಯುವಪೀಳಿಗೆಗೆ ಬೇರೆ ಬೇರೆ ಶೈಲಿಯ ಆಹಾರವನ್ನು ಟೇಸ್ಟ್ ಮಾಡಬೇಕು ಅನಿಸುವುದು ಸಹ ಸಹಜ. ಅದಕ್ಕಾಗಿ ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಂಪಲ್ ಮತ್ತು ಸ್ಪೈಸಿ ಆಂಧ್ರ ಶೈಲಿಯ ತಲೆಮಾಂಸದ ಸಾಂಬಾರ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.
Advertisement
ಬೇಕಾಗುವ ಸಾಮಗ್ರಿಗಳು:
ತಲೆಮಾಂಸ – 1ಕೆಜಿ
ತೆಂಗಿನಕಾಯಿ -ಅರ್ಧ
ಬೆಳ್ಳುಳ್ಳಿ – 1 ಗೆಡ್ಡೆ
ಈರುಳ್ಳಿ – 2
ಶುಂಠಿ – ಅರ್ಧ ಇಂಚು
ಧನಿಯಾ ( ಕೊತ್ತಂಬರಿ ಪುಡಿ ) – 3 ಚಮಚ
ಅಚ್ಚ ಖಾರದ ಪುಡಿ – 1 ಚಮಚ
ಹಸಿರು ಮೆಣಸಿನ ಕಾಯಿ – 4
ಕೊತ್ತಂಬರಿ ಸೊಪ್ಪು – ಸ್ವಲ್ಪ
ಪುದಿನ ಸೊಪ್ಪು -ಅಗತ್ಯಕ್ಕೆ ತಕ್ಕಷ್ಟು
ಚಕ್ಕೆ ಲವಂಗ –
ಕರಿಬೇವು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
Advertisement
Advertisement
ಮಾಡುವ ವಿಧಾನ:
*ಮೊದಲಿಗೆ ತಲೆಮಾಂಸವನ್ನು ನೀರಿನಲ್ಲಿ ತೊಳೆದಿಟ್ಟುಕೊಳ್ಳಬೇಕು
* ಬಳಿಕ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಬೆಳ್ಳುಳ್ಳಿ, ಈರುಳ್ಳಿ,ಶುಂಠಿ, ಧನಿಯಾ ಪುಡಿ, ಅಚ್ಚ ಖಾರದ ಪುಡಿ, ಕೊತ್ತಂಬರಿ ಸೊಪ್ಪು , ಪುದಿನ ಸೊಪ್ಪು ಹಾಕಿ ಚನ್ನಾಗಿ ರುಬ್ಬಿಕೊಳ್ಳಬೇಕು.
* ಈಗ ಒಂದು ಕುಕ್ಕರ್ಗೆ 3 ಚಮಚ ಅಡುಗೆ ಎಣ್ಣೆ ಹಾಕಿ ಸ್ವಲ್ಪ ಕರಿಬೇವು, ಹಸಿಮೆಣಸಿನಕಾಯಿ ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಬಳಿಕ ತೊಳೆದಿಟ್ಟ ಮಟನ್ (ತಲೆ ಮಾಂಸ ) ಹಾಕಿ ಸ್ವಲ್ಪ ಸಮಯ ಮಾಂಸದ ಹಸಿ ವಾಸನೆ ಹೋಗುವವರೆಗೆ ಕೈ ಆಡಿಸಿ.
* ಹಸಿ ವಾಸನೆ ಹೋದಮೇಲೆ ರುಬ್ಬಿಟ್ಟುಕೊಂಡ ಮಸಾಲೆಯನ್ನು ಮಟನ್ ಜೊತೆ ಮಿಕ್ಸ್ ಮಾಡಿ. ಮಸಾಲೆ ಮಾಂಸಕ್ಕೆ ಚನ್ನಾಗಿ ಹೊಂದಿಕೊಳ್ಳಬೇಕು.
* ನಂತರ ಮಟನ್ ಬೇಯಲು ಬೇಕಾಗುವಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 3 ರಿಂದ 4 ವಿಶಲ್ ಕೂಗಿಸಿಕೊಳ್ಳಿ.
* ಕುಕ್ಕರ್ ತಣ್ಣಗಾದ ನಂತರ ಓಪನ್ ಮಾಡಿ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿದರೆ ಆಂಧ್ರ ಶೈಲಿಯ ತಲೆಮಾಂಸದ ಸಾಂಬಾರ್ ರೆಡಿ.
* ಮುದ್ದೆ, ರೈಸ್ ಜೊತೆ ಸವಿಯಲು ಈ ಸಾಂಬಾರ್ ಪರ್ಫೆಕ್ಟ್ ಕಾಂಬಿನೇಷನ್ ಅಂದರೆ ತಪ್ಪಾಗಲಾರದು.
Advertisement