ಸ್ಯಾನ್‍ಫ್ರಾನ್ಸಿಸ್ಕೋ: ಭಾರತ ಮೂಲದ ಸುಂದರ್ ಪಿಚೈ ಈಗ ಜಾಗತಿಕ ಐಟಿ ದಿಗ್ಗಜ ಗೂಗಲ್ ಕಂಪನಿಯ ಮಾತೃ ಸಂಸ್ಥೆ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.
ಗೂಗಲ್ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಅಲ್ಫಾಬೆಟ್‍ನಿಂದ ಹೊರನಡೆದಿದ್ದು ಆ ಸಂಸ್ಥೆಯನ್ನು ಇನ್ನು ಮುಂದೆ ಸುಂದರ್ ಪಿಚೈ ನೋಡಿಕೊಳ್ಳಲಿದ್ದಾರೆ. ಸರ್ಜಿ ಬ್ರಿನ್ ಮತ್ತು ಲ್ಯಾರಿ ಪೇಜ್ ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
Advertisement
ಐದು ವರ್ಷಗಳ ಹಿಂದೆ 2005ರ ಅಕ್ಟೋಬರ್ 2 ರಂದು ಗೂಗಲ್, ಕ್ಯಾಲಿಕೋ, ಗೂಗಲ್ ಫೈಬರ್, ಡೀಪ್ ಮೈಂಡ್ ಸೇರಿದಂತೆ ಎಲ್ಲವನ್ನೂ ಒಗ್ಗೂಡಿಸಲು ಗೂಗಲ್ ಮಾತೃ ಸಂಸ್ಥೆ ಅಲ್ಫಾಬೆಟ್ ಸ್ಥಾಪಿಸಿ ಪೇಜ್ ಮತ್ತು ಬಿನ್ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು.
Advertisement
Advertisement
ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಪತ್ರ ಬರೆದಿದ್ದು, ಇನ್ನು ಮುಂದೆ ಗೂಗಲ್ ಮತ್ತು ಅಲ್ಫಾಬೆಟ್ ಕಂಪನಿಗೆ ಇಬ್ಬರು ಸಿಇಒಗಳು ಇರುವುದಿಲ್ಲ. ಎರಡೂ ಕಂಪನಿಯನ್ನು ಒಬ್ಬರೇ ನೋಡಿಕೊಳ್ಳಲಿದ್ದಾರೆ. ಸುಂದರ್ ನಮ್ಮ ಜೊತೆ 15 ವರ್ಷಗಳಿಂದ ಇದ್ದು, ಈತ ತಂತ್ರಜ್ಞಾನವನ್ನು ಪ್ರೀತಿಸುವ ವ್ಯಕ್ತಿಯಾಗಿದ್ದಾನೆ. ಆತನ ಮೇಲೆ ನಮಗೆ ಪೂರ್ಣ ನಂಬಿಕೆಯಿದೆ. ಈ ಸಂಸ್ಥೆಯನ್ನು ಮುನ್ನಡೆಸಲು ಸುಂದರ್ ಅವರಿಗಿಂತ ಸಮರ್ಥ ವ್ಯಕ್ತಿ ಬೇರೆ ಇಲ್ಲ. ತಂತ್ರಜ್ಞಾನ, ಉದ್ಯಮ, ಭವಿಷ್ಯದ ಯೋಜನೆ ಕುರಿತು ಅವರಿಗೆ ಸ್ಪಷ್ಟವಾದ ಜ್ಞಾನವಿದೆ ಎಂದು ಹೇಳಿ ಸುಂದರ್ ಅವರನ್ನು ಹೊಗಳಿದ್ದಾರೆ.
Advertisement
I’m excited about Alphabet’s long term focus on tackling big challenges through technology. Thanks to Larry & Sergey, we have a timeless mission, enduring values and a culture of collaboration & exploration – a strong foundation we’ll continue to build on https://t.co/tSVsaj4FsR
— Sundar Pichai (@sundarpichai) December 4, 2019
ಸುಂದರ್ ಪಿಚೈ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗುತ್ತಿದ್ದಂತೆ ಭಾರತೀಯ ಕಂಪನಿಗಳ ಮುಖ್ಯಸ್ಥರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸುತ್ತಿದ್ದಾರೆ.
ಯಾರು ಸುಂದರ್ ಪಿಚೈ?
ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್, ಆಂಡ್ರಾಯ್ಡ್ ಅಪ್ಲಿಕೇಶನ್ ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ, ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು. ಸುಂದರ್ ಗೂಗಲ್ ಸೇರಿದ್ದು 2004 ರ ಏಪ್ರಿಲ್ 1 ರಂದು. ಈ ದಿನವೇ ಗೂಗಲ್ ಜಿಮೇಲ್ ಸೇವೆಯನ್ನು ಆರಂಭಿಸಿತ್ತು.
India’s most robust export product is probably the ‘Global CEO.’ It’s now a universal perception that Indian executives are leadership material. If only there was some way of monetising these ‘exports,’ India would have a perpetual balance of payments surplus! ???? https://t.co/y1n4EZeCaW
— anand mahindra (@anandmahindra) December 4, 2019