ಹಾಸನ: 4 ವರ್ಷಗಳ ನಂತರ ಮತ್ತೇ ಅಪರೂಪದ ಕ್ಷಣ ಸೃಷ್ಟಿಯಾಗಿದ್ದು, ಇಂದು ಬೆಳಗ್ಗೆ ಐತಿಹಾಸಿಕ ಬೇಲೂರು (Beluru) ಶ್ರೀ ಚನ್ನಕೇಶವಸ್ವಾಮಿ (Chennakeshavaswamy) ವಿಗ್ರಹವನ್ನು ಸೂರ್ಯನ ರಶ್ಮಿ ಸ್ಪರ್ಶಿಸಿದೆ.
ದೇವಾಲಯದಲ್ಲಿ ಕಳೆದ 4 ವರ್ಷಗಳಿಂದ ಸೂರ್ಯನ ರಶ್ಮಿ ಶ್ರೀ ಚನ್ನಕೇಶವಸ್ವಾಮಿ ವಿಗ್ರಹವನ್ನು ಸ್ಪರ್ಶಿಸಿರಲಿಲ್ಲ. ಮಳೆ, ಮೋಡ ಕವಿದ ವಾತಾವರಣದಿಂದ ವಿಗ್ರಹದ ಮೇಲೆ ಸೂರ್ಯನ ರಶ್ಮಿ ಬೀಳಲು ಅಡ್ಡಿಯುಂಟಾಗಿತ್ತು. ಈ ವರ್ಷ ಅಡೆತಡೆ ನಿವಾರಣೆಯಾಗಿದ್ದು, ಭಕ್ತರಲ್ಲಿ ಸಾರ್ಥಕದ ಕ್ಷಣ ಮನೆ ಮಾಡಿತ್ತು. ಇದನ್ನೂ ಓದಿ: ನಗದಿನ ಮೂಲಕ ಸಂಭಾವನೆ – ಮಹೇಶ್ ಬಾಬುಗೆ ಇಡಿ ನೋಟಿಸ್
ಪ್ರತಿ ವರ್ಷ ಏ.21 ಅಥವಾ ಏ.22ರಂದು ದೇವರ ವಿಗ್ರಹಕ್ಕೆ ಸ್ಪರ್ಶಿಸುತ್ತಿದ್ದ ಸೂರ್ಯ ಇಂದು ಬೆಳಿಗ್ಗೆ 6:10ಕ್ಕೆ ಗೋಪುರವನ್ನು ಸ್ಪರ್ಶಿಸಿ, ಬಳಿಕ 6:15ಕ್ಕೆ ದೇವರ ವಿಗ್ರಹಕ್ಕೆ ಸ್ಪರ್ಶಿಸಿದ. ದೇವರ ವಿಗ್ರಹದ ಮೇಲೆ ಸೂರ್ಯನ ರಶ್ಮಿ ಬೀಳುವುದನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು. ಇದನ್ನೂ ಓದಿ: ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದ – ವಿಂಗ್ ಕಮಾಂಡರ್ ವಿರುದ್ಧ ಕೊನೆಗೂ ಎಫ್‌ಐಆರ್ ದಾಖಲು
ಸೂರ್ಯನ ರಶ್ಮಿ ಶ್ರೀ ಚನ್ನಕೇಶವಸ್ವಾಮಿ ವಿಗ್ರಹ ಸ್ಪರ್ಶಿಸುತ್ತಿದ್ದಂತೆ ಗರ್ಭಗುಡಿ ಬಂದ್ ಮಾಡಲಾಯಿತು. ಬಳಿಕ 9 ಗಂಟೆ ನಂತರ ಅರ್ಚಕರು ಹಾಲಿನಿಂದ ದೇವರ ಪಾದ ತೊಳೆದು ಪೂಜೆ ಸಲ್ಲಿಸಲಿದರು. ಕಳೆದ 4 ವರ್ಷಗಳಿಂದ ಕಾದು ಕಾದು ಬೇಸರದಿಂದ ಹಿಂದಿರುಗುತ್ತಿದ್ದ ಭಕ್ತರು, ಈ ಬಾರಿ ಅಪರೂಪದ ದೃಶ್ಯ ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದರು.