ಬೆಂಗಳೂರು: ಬೇಸಿಗೆಕಾಲ ಬರುತ್ತಿದ್ದಂತೆ ಮನೆಗೆ ಹಾವುಗಳು ಬರುತ್ತಿದ್ದು, ಇದರಿಂದ ಸಿಲಿಕಾನ್ ಸಿಟಿಯ ಜನರು ಜನರು ಗಾಬರಿ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆ ಉರಗ, ಪಕ್ಷಿಗಳು ತತ್ತರಿಸಿ ಹೋಗಿವೆ. ನೀರಿನ ಆಸರೆ ಹುಡುಕಿ ಇದೀಗ ಹಾವುಗಳು ಹುತ್ತ ಬಿಟ್ಟು ನೀರಿರುವ ಜಾಗಗಳಿಗೆ ಬರಲು ಶುರು ಮಾಡಿವೆ. ಮನೆಯೊಳಗಿನ ಚಿಕ್ಕ ಗಾರ್ಡ್ ನಗಳು ಹೂವಿನ ಕುಂಡಗಳು, ಬಾತ್ ರೂಮ್‍ಗಳು, ಮನೆಯೊಳಗಿನ ಎಸಿ, ಫಿಶ್ ಅಕ್ವೇರಿಯಂ ಸೇರಿದಂತೆ ಕಾರಿನೊಳಗೆ ಬಂದು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಶುರು ಮಾಡಿವೆ. ಇದರಿಂದ ಕೇವಲ ಒಂದು ವಾರದಲ್ಲಿ 50ಕ್ಕೂ ಹೆಚ್ಚು ಮನೆಯೊಳಗೆ ಬಂದಿದ್ದ ಹಾವುಗಳನ್ನು ಉರಗ ತಜ್ಞ ಮೋಹನ್ ರಕ್ಷಣೆ ಮಾಡಿದ್ದಾರೆ.
Advertisement
Advertisement
ಹಾವುಗಳು ಹೆಚ್ಚು ಬಿಸಿಲನ್ನು ತಡೆದುಕೊಳ್ಳುವುದಿಲ್ಲ ಮತ್ತು ಕಡಿಮೆ ಉಷ್ಣಾಂಶಕ್ಕು ತಡೆದುಕೊಳ್ಳುವ ಶಕ್ತಿ ಅವುಗಳಿಗೆ ಇಲ್ಲ. ಇದರಿಂದ ಈ ಬಿರು ಬಿಸಿಲಿನ ಬೇಗೆಗೆ ಹಾವುಗಳು ಮನೆಯೊಳಗಿನ ತಣ್ಣನೆ ವಾತಾವರಣಕ್ಕೆ ಬರಲು ಶುರು ಮಾಡಿವೆ. ಇತ್ತೀಚೆಗೆ ರಾಜ ಭವನ ಫಿಶ್ ಅಕ್ವೇರಿಯಂಗು ಸಹ ಹಾವು ಬಂದಿತ್ತು. ಅದನ್ನು ರಕ್ಷಣೆ ಮಾಡಿ ಕಾಡಿನೊಳಗೆ ಬಿಟ್ಟಿದ್ದೇವೆ. ಹಾಗಾಗಿ ಮನೆಯೊಳಗೆ ತಣ್ಣನೆ ಪ್ರದೇಶ ಮತ್ತು ಗಾರ್ಡನ್ ಗಳಿಗೆ ನೀರು ಹಾಕಲು ಹೋಗುವ ಮುನ್ನ ಎಚ್ಚರಿದಿಂದರಬೇಕು ಎಂದು ಉರಗ ತಜ್ಞ ಮೋಹನ್ ಹೇಳಿದ್ದಾರೆ.
Advertisement
Advertisement
ಬೇಸಿಗೆ ಕಂಡರೆ ಮನುಷ್ಯರು ಮಾತ್ರ ಅಲ್ಲ ಪ್ರಾಣಿ ಪಕ್ಷಗಳು, ಹಾವುಗಳು ಸಹ ಭಯ ಪಡುತ್ತವೆ. ಹಾಗಾಗಿ ನಿಮ್ಮ ಮನೆಯೊಳಗೆ ಹಾವುಗಳೇನಾದರು ಬಂದರೆ ಅವುಗಳನ್ನು ಹೊಡೆದು ಸಾಯಿಸದೆ ಕೂಡಲೇ ಬಿಬಿಎಂಪಿ ಅರಣ್ಯ ಘಟಕ ಫೋನ್ ಮಾಡಿ ಅವುಗಳನ್ನು ರಕ್ಷಣೆ ಮಾಡಿ ಎಂದು ಮೋಹನ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv