ಬೆಂಗಳೂರು: ಸಿಲಿಕಾನ್ ಸಿಟಿ (Silicon City) ಸೇರಿದಂತೆ ರಾಜ್ಯದ ಹಲವೆಡೆ ರಣಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ (Meterological Department) ಎಚ್ಚರಿಕೆ ನೀಡಿದೆ.
ಈಗಾಗಲೇ ಇನ್ನೇನು ಬೇಸಿಗೆ ಕಾಲ ಶುರವಾಗಲಿದ್ದು ಈ ಬಾರಿ ವಾಡಿಕೆಗಿಂತ ಹೆಚ್ಚು ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬರುವ ಮುಂದಿನ ನಾಲ್ಕು ತಿಂಗಳು ಈ ರಣಬಿಸಿಲು ರಾಜ್ಯದ ಜನರನ್ನು ಕಾಡಲಿದೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು
Advertisement
Advertisement
ಹವಾಮಾನ ವೈಪರೀತ್ಯ ಹಿನ್ನೆಲೆ ಬೇಸಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಅದರಿಂದ ಎಂದಿಗಿಂತ ಮುನ್ನವೇ ಈ ಬಾರಿ ಬೇಸಿಗೆ ಬಿಸಿಲು ಆರಂಭವಾಗಲಿದೆ. ತೇವಾಂಶ ಭರಿತ ಮೋಡಗಳ ಸೆಳೆತ ಮತ್ತು ಗಾಳಿ ವೇಗ ಇಲ್ಲದಿರುವುದರ ಪರಿಣಾಮ ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆಯಿಂದ ರಣಬಿಸಿಲು ಕಾಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ: ಸುಧಾಕರ್
Advertisement
Advertisement
ಫೆಬ್ರವರಿಯಿಂದ ಮುಂದಿನ ನಾಲ್ಕು ತಿಂಗಳು ಬೇಸಿಗೆ ಕಾಲ ಇರಲಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಲಿದೆ. ಸದ್ಯ ಫೆಬ್ರವರಿಯಲ್ಲೇ 33-25 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಏರಿಕೆಯಾಗುತ್ತಿದೆ. ವಾಡಿಕೆಗಿಂತ 2-3 ಡಿಗ್ರಿ ಉಷ್ಣಾಂಶ ದಿಢೀರ್ ಏರಿಕೆಯಾಗಿದೆ. ಇದನ್ನೂ ಓದಿ: ಇಂದು ಮೋದಿ ಭಾಷಣ – ಬಿಜೆಪಿ ಸಂಸದರ ಹಾಜರಿ ಕಡ್ಡಾಯ