ಬೇಸಿಗೆಯಲ್ಲಿ (Summer) ನಾರಿಮಣಿಯರು ಪ್ರಯಾಣ ಮಾಡಬೇಕಾದ ಸಂದರ್ಭ ಬಂದಾಗ ಆದಷ್ಟೂ ಬೇಸಿಗೆ ಕಾಲಕ್ಕೆ ಹೊಂದುವಂತಹ ಕಂಫರ್ಟಬಲ್ ಕೂಲ್ ಫ್ಯಾಷನ್ ತಮ್ಮದಾಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆರಾಮದಾಯಕವಲ್ಲದ ಪ್ರಯಾಣ ನಿಮ್ಮದಾಗಬಹುದು. ಇದಕ್ಕಾಗಿ ಯಾವ ಬಗೆಯ ಫ್ಯಾಷನ್ ಬಟ್ಟೆಗಳನ್ನು (Fashion Dress) ಆಯ್ಕೆ ಮಾಡಬೇಕು? ಯಾವುದನ್ನು ಆವಾಯ್ಡ್ ಮಾಡಬೇಕು? ಎಂಬುದರ ಬಗ್ಗೆ ಫ್ಯಾಷನ್ ಸಂಬಂಧಿಸಿದ ಒಂದಿಷ್ಟು ಸಲಹೆಗಳು ಇಲ್ಲಿವೆ. ಇದನ್ನೂ ಓದಿ:ನಟಿ ರಮೋಲ ಒಂದು ದಿನದ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ!
ಸುಡುಬೇಸಿಗೆಯಲ್ಲಿ ಒಪ್ಪುವಂತಹ ಟ್ರಾವೆಲ್ ಫ್ಯಾಷನ್ ಈಗಾಗಲೇ ಲಗ್ಗೆ ಇಟ್ಟಿದ್ದು, ಆರಾಮದಾಯಕ ಎಂದೆನಿಸುವ ನಾನಾ ಬಗೆಯ ಸಮ್ಮರ್ ಫ್ಯಾಷನ್‌ವೇರ್‌ಗಳು ಫ್ಯಾಷನ್ ಲೋಕದಲ್ಲಿ ಸದ್ದು ಮಾಡುತ್ತಿದೆ. ಪ್ರತಿ ಸಮ್ಮರ್‌ನಲ್ಲೂ ಟ್ರಾವೆಲ್ ಮಾಡುವುದು ಸಾಕುಸಾಕಪ್ಪ ಎಂದನಿಸುತ್ತದೆ. ಧರಿಸಿರುವ ಉಡುಪು ಆಕ್ಸೆಸರೀಸ್‌ಗಳು ಕೆಲವೊಮ್ಮೆ ಉಸಿರುಗಟ್ಟಿಸುತ್ತವೆ. ಹೇರ್ ಸ್ಟೈಲ್ ಕಿರಿಕಿರಿಯುಂಟು ಮಾಡುತ್ತವೆ. ಮುಖ ಬೆವೆತು ಮೇಕಪ್ ನೀರಾಗುತ್ತದೆ. ಕಂಫರ್ಟಬಲ್ ಪದ ಉಲ್ಟಾ ಹೊಡೆಯುತ್ತದೆ. ಸೋ, ಸಮ್ಮರ್‌ನಲ್ಲಿ ಆದಷ್ಟೂ ಸಿಂಪಲ್ ಹಾಗೂ ಕಂಫರ್ಟಬಲ್ ಸ್ಟೈಲಿಂಗ್ ಉತ್ತಮ.
ಟ್ರಾವೆಲ್ ಮಾಡುವಾಗ ಧರಿಸುವ ಉಡುಪು ಸಮ್ಮರ್‌ಗೆ ಸೂಟ್ ಆಗುವಂತಿರಬೇಕು. ಅದರಲ್ಲೂ ಬೇಸಿಗೆಯ ಬಿರು ಬಿಸಿಲಿಗೆ ಅಂಟುವಂತಿರಬಾರದು. ಆದಷ್ಟೂ ಹಗುರವಾದ, ಆರಾಮ ಏನಿಸುವ ಉಡುಪುಗಳನ್ನು ಆಯ್ಕೆ ಮಾಡಬೇಕು. ಶಾರ್ಟ್ ಹಾಗೂ ಸ್ಲೀವ್‌ಲೆಸ್‌ಗೆ ಆದ್ಯತೆ ನೀಡಿದರೆ ಉತ್ತಮ. ಅದರಲ್ಲೂ ಸಿಂಪಲ್ ಬಟ್ಟೆಗಳನ್ನು ಆಯ್ಕೆ ಮಾಡುವುದು ಬೆಸ್ಟ್. ಆದಷ್ಟೂ ಸೀರೆ ಹಾಗೂ ಗಾಗ್ರ, ಲೆಹೆಂಗಾದಂತಹ ಉಡುಪುಗಳಿಗೆ ಗುಡ್ ಬೈ ಹೇಳುವುದು ಬೆಸ್ಟ್. ಇನ್ನು, ಪ್ರಯಾಣಿಸುವಾಗ ಆದಷ್ಟೂ ಉಲ್ಲಾಸ ತುಂಬುವ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಇನ್ನು, ಕಾಲರ್ ನೆಕ್, ಟೈಟ್ ಫಿಟ್ಟಿಂಗ್, ಮೈಗೆ ಅಂಟಿಕೊಳ್ಳುವಂತಹ ಹಗ್ಗಿಂಗ್ ಡ್ರೆಸ್, ಫುಲ್ ಸ್ಲೀವ್ ಸಲ್ವಾರ್, ಲಾಂಗ್ ಸಲ್ವಾರ್ ಸೇರಿದಂತೆ ಅಡಿಯಿಂದ ಮುಡಿಯವರೆಗೆ ಗಾಳಿಯಾಡದಂತೆ ಕ್ಲೋಸ್ ಆಗಿರುವಂತಹ ಉಡುಪುಗಳು ಬೇಸಿಗೆ ಟ್ರಾವೆಲ್ ಟೈಮ್‌ಗೆ ಯಾವುದೇ ಕಾರಣಕ್ಕೂ ಆಯ್ಕೆ ಮಾಡಿಕೊಳ್ಳಬೇಡಿ. ಇವು ಉಸಿರುಗಟ್ಟಿಸುವುದರೊಂದಿಗೆ ನಿಮ್ಮನ್ನು ನಿತ್ರಾಣರಾಗಿಸುತ್ತವೆ.
ಈ ಸೀಸನ್‌ನಲ್ಲಿ, ಅದರಲ್ಲೂ ಟ್ರಾವೆಲ್ ಮಾಡುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಭಾರಿ ಆಭರಣಗಳನ್ನು ಧರಿಸಬೇಡಿ. ಅದರಲ್ಲೂ ಬಂಗಾರವನ್ನು ದೂರವಿಡಿ. ಇವು ಮೈ ಮೇಲೆ ಭಾರವೆನಿಸುತ್ತವೆ. ಜೊತೆಗೆ ಕಂಫರ್ಟಬಲ್ ಆಗಿರುವುದಿಲ್ಲ. ಈ ವೇಳೆ, ಸಿಂಪಲ್ ಸ್ಟಡ್ಸ್ ಹಾಗೂ ಚೈನ್ ಆಯ್ಕೆ ಮಾಡಿದರೆ ಜಂಜಾಟವಿರುವುದಿಲ್ಲ.
ಯಾವುದೇ ಕಾರಣಕ್ಕೂ ಫುಲ್ ಬೂಟ್ಸ್ ಅಥವಾ ಆಫ್ ಶೂಗಳಂತವನ್ನು ಟ್ರಾವೆಲ್ ಸಮಯದಲ್ಲಿ ಆವಾಯ್ಡ್ ಮಾಡಿ. ಇವು ಪಾದವನ್ನು ಕವರ್ ಮಾಡುವುದರಿಂದ ಗಾಳಿಯಾಡಲು ಅವಕಾಶ ಸಿಗದೇ ಪಾದಗಳು ಜಡ್ಡು ಹಿಡಿದಂತೆ ಆಗಬಹುದು. ಫ್ಲಿಪ್ ಫ್ಲಾಪ್ ಚಪ್ಪಲಿಗಳು, ಒಪನ್ ಸ್ಟ್ರಾಪ್ ಸ್ಯಾಂಡಲ್‌ಗಳನ್ನು ಧರಿಸಬಹುದು.
ಬೇಸಿಗೆಯಲ್ಲಿ ಟ್ರಾವೆಲ್ ಮಾಡುವಾಗ ಆದಷ್ಟು ಸಿಂಪಲ್ ಮೇಕಪ್‌ಗೆ ಆದ್ಯತೆ ನೀಡಿ. ಮುಖ ಬೆವರಿದರೆ ಸ್ವೆಟ್ ಟಿಶ್ಯೂ ಜೊತೆಯಲ್ಲಿಟ್ಟುಕೊಳ್ಳಿ. ಹಾಗೆಂದು ಕಂಡ ಕಂಡ ಕಡೆಯೆಲ್ಲಾ ಮುಖ ತೊಳೆಯುವುದನ್ನು ರೂಢಿಸಿಕೊಳ್ಳಬೇಡಿ. ಕೆಲವೊಮ್ಮೆ ನೀರಿನಿಂದ ಮುಖ ತೀರಾ ಡ್ರೈ ಆಗುವ ಸಂದರ್ಭವಿರುತ್ತದೆ. ಒಂದು ದಿನಕ್ಕಿಂತ ಹೆಚ್ಚು ಸಮಯ ಟ್ರಾವೆಲ್‌ನಲ್ಲಿ ಕಳೆಯಬೇಕಾದಲ್ಲಿ, ಹೊರದೇಶಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಕಣ್ಣಿಗೆ ಕಾಡಿಗೆ ಬಳಸುವುದನ್ನು ಅವಾಯ್ಡ್ ಮಾಡಿ. ಸನ್ ಟ್ಯಾನ್ ಆಗದಂತೆ ನೋಡಿಕೊಳ್ಳಿ.
ಸಮ್ಮರ್ ಟ್ರಾವೆಲ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್:
* ಭಾರಿ ತೂಕದ ಜಾಕೆಟ್ ಸ್ಕಾರ್ಫ್, ಕೋಟ್ ಧರಿಸಬೇಡಿ.
* ಸನ್‌ಸ್ಕ್ರೀನ್ ಹಾಗೂ ಮಾಯಿಶ್ಚರೈಸರ್ ಜೊತೆಗಿರಲಿ.
* ನಿಯಾನ್ ಹಾಗೂ ಟ್ರೈಟ್ ಪ್ಲೋರಲ್ ಟ್ರೆಂಡಿ ಉಡುಪುಗಳ ಆಯ್ಕೆ ಮಾಡಿ.