ಬೇಸಿಗೆಯಲ್ಲಿ (Summer) ಹೇಳಿ ಮಾಡಿಸಿದ ಹಣ್ಣು ಕಲ್ಲಂಗಡಿ (Watermelon). ಬೇಸಿಗೆಯಲ್ಲಿ ಆಗುವ ಆಯಾಸ, ಬಾಯಾರಿಕೆ ಹೋಗಲಾಡಿಸಲು ಇದು ಈ ರಸಭರಿತ ಹಣ್ಣನ್ನು ಹೆಚ್ಚಾಗಿ ಖರೀದಿಸುತ್ತಾರೆ. ಈ ಹಣ್ಣನ್ನು ತಿನ್ನುವುದರಿಂದ ಟೇಸ್ಟ್ ಜೊತೆಗೆ ಅನೇಕ ಪ್ರಯೋಜನಗಳಿವೆ.
ತೂಕ ಇಳಿಕೆ: ಕಲ್ಲಂಗಡಿ ತಿನ್ನುವುದರಿಂದ ನಿಮ್ಮ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಬೆಳಗ್ಗಿನ ಉಪಹಾರದಲ್ಲಿ ನೀವು ಕಲ್ಲಂಗಡಿಯನ್ನು ತಿನ್ನಬೇಕು. ಇದರಿಂದಾಗಿ ದಿನವಿಡೀ ಫ್ರೆಶ್ ಆಗಿರುತ್ತೀರಿ. ಜೊತೆಗೆ ತೂಕದ ಇಳಿಕೆಯು ಆಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಈ ಹಣ್ಣುಗಳು ನೆಗೆಟಿವ್ ಕ್ಯಾಲೋರಿಯನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಾಯ: ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ಚರ್ಮದ ಆರೋಗ್ಯ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಜೊತೆಗೆ ಚಯಾಪಚಯ ಹಾಗೂ ಹಸಿವನ್ನು ಸುಧಾರಿಸುತ್ತದೆ. ಇದನ್ನೂ ಓದಿ: ಪೀರಿಯಡ್ಸ್ ಸಮಯದಲ್ಲಾಗುವ ಹೊಟ್ಟೆನೋವಿಗೆ ಇಲ್ಲಿದೆ ಮನೆ ಮದ್ದು
ಕಡಿಮೆ ಆಗುತ್ತೆ ಮೂತ್ರಪಿಂಡದ ಅಸ್ವಸ್ಥತೆ: ಪೊಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಅಂಶಗಳು ಕಲ್ಲಂಗಡಿಯಲ್ಲಿ ಹೇರಳವಾಗಿ ದೊರೆಯುತ್ತದೆ. ಇದು ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ರಕ್ತದಲ್ಲಿನ ಯೂರಿಕ್ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಮೂತ್ರಪಿಂಡದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಕಡಿಮೆ ರಕ್ತದೊತ್ತಡ: ಕಲ್ಲಂಗಡಿಯಲ್ಲಿ ಸಿಟ್ರುಲಿನ್ ಎಂಬ ಅಮೈನೋ ಆಮ್ಲವಿದೆ. ಇದನ್ನು ದೇಹದಿಂದ ಅರ್ಜಿನೈನ್ ಆಗಿ ಪರಿವರ್ತಿಸಲಾಗುತ್ತದೆ. ಸಿಟ್ರುಲಿನ್ ಜೊತೆಗೆ ಈ ಅರ್ಜಿನೈನ್ ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ಸಡಿಲಗೊಳಿಸುತ್ತದೆ. ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ನಿಮ್ಮ ತ್ವಚೆಗೆ ಒಳ್ಳೆಯದು: 95 ಪ್ರತಿಶತದಷ್ಟು ಕಲ್ಲಂಗಡಿಯುವ ಕೇವಲ ನೀರಿನ್ನು ಹೊಂದಿರುತ್ತದೆ. ಇದು ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ಚರ್ಮವು ಹೆಚ್ಚು ಕಾಂತಿಯುತವಾಗಿಸುತ್ತದೆ. ಇದನ್ನೂ ಓದಿ: ಮಧುಮೇಹಿಗಳಿಗೆ ಆಹಾರದ ಹೊರತಾಗಿ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿದೆ ಕೆಲವು ಸಲಹೆ