ಮಂಗಳೂರು: ಏಪ್ರಿಲ್ 15, 16 ಮತ್ತು 17ರಂದು ನಡೆದ ಕೆಸಿಇಟಿ (KCET) ಪರೀಕ್ಷೆಯಲ್ಲಿ ಕಾರ್ಕಳದ (Karkala) ಕ್ರಿಯೇಟಿವ್ ಪಿ.ಯು ಕಾಲೇಜಿನ ಸುಮಂತ್ ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.
ಪ್ರಸ್ತುತ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಕಾಲೇಜಿನ ಸುಮಂತ್ ಗೌಡ ಎಸ್ ದಾನಪ್ಪಗೌಡರ್ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್, ಬಿಎನ್‌ವೈಎಸ್ ವಿಭಾಗದಲ್ಲಿ 9ನೇ ರ‍್ಯಾಂಕ್, ಬಿಎಸ್‌ಸಿ ನರ್ಸಿಂಗ್ ವಿಭಾಗದಲ್ಲಿ 18ನೇ ರ‍್ಯಾಂಕ್, ಪಶು ವೈದ್ಯಕೀಯ ವಿಭಾಗದಲ್ಲಿ 18ನೇ ರ‍್ಯಾಂಕ್, ಬಿ/ಡಿ-ಫಾರ್ಮ್ ವಿಭಾಗಗಳಲ್ಲಿ 25 ನೇ ರ‍್ಯಾಂಕ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 34ನೇ ರ‍್ಯಾಂಕ್ ಗಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಮಧ್ಯೆ ಶಾಲಾ ಕಾಲೇಜುಗಳು ಆರಂಭ – ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್!
ಸುಮಂತ್ ಗೌಡ ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರ ಗ್ರಾಮದವರಾಗಿದ್ದು, ಉತ್ತಮ ಪಿಯು ಶಿಕ್ಷಣಕ್ಕಾಗಿ ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದರು. ಸುಮಂತ್ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 590 ಅಂಕಗಳನ್ನು ಗಳಿಸಿದ್ದಾರೆ. ಸುಮಂತ್ ತಂದೆ ಮತ್ತು ತಾಯಿ ಇಬ್ಬರೂ ಹೈಸ್ಕೂಲ್ ಶಿಕ್ಷಕರಾಗಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ | ಭಾರೀ ಮಳೆಗೆ ಭೂಕುಸಿತ – ಹೆದ್ದಾರಿಯಲ್ಲಿ 6 ಕಿ.ಮೀ ಟ್ರಾಫಿಕ್
ಕಾಲೇಜಿನಲ್ಲಿ ಪ್ರತಿದಿನ ಬೋರ್ಡ್ ಪರೀಕ್ಷೆಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಮರ್ಪಕವಾಗಿ ತರಬೇತಿ ನೀಡಲಾಗುತ್ತಿತ್ತು. ನಾನು ಮುಂದೆ ಒಬ್ಬ ಉತ್ತಮ ವೈದ್ಯನಾಗಬೇಕೆಂಬ ಕನಸು ಹೊಂದಿದ್ದೇನೆ ಎಂದು ಸುಮಂತ್ ತಿಳಿಸಿದ್ದಾರೆ. ಇದನ್ನೂ ಓದಿ: ನೈತಿಕ ಮೌಲ್ಯಗಳ ಕೊರತೆ – ಆರ್‌ಜೆಡಿಯಿಂದ ಪುತ್ರ ತೇಜ್ ಪ್ರತಾಪ್‌ರನ್ನ ಹೊರದಬ್ಬಿದ ಲಾಲು ಪ್ರಸಾದ್ ಯಾದವ್