ನವದೆಹಲಿ: ಲಂಡನಿನಲ್ಲಿ ನಡೆದ 2019ರ ಮಿಸ್ ವರ್ಲ್ಡ್ 2019 ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದ ಸುಮನ್ ರಾವ್ ಇದೀಗ ಮಿಸ್ ವರ್ಲ್ಡ್ ಏಷಿಯಾ 2019 ಕಿರೀಟ ಧರಿಸಿದ್ದಾರೆ.
21 ವರ್ಷದ ಮಾಡೆಲ್ ಸುಮನ್ ರಾವ್ ಮಿಸ್ ವರ್ಲ್ಡ್ ನಲ್ಲಿ ಟಾಪ್ 3ರಲ್ಲಿ ಆಯ್ಕೆಯಾಗಿ 2ನೇ ರನ್ನರ್ ಅಪ್ ಆಗಿದ್ದರು. ಮಿಸ್ ಜಮೈಕಾ ಟೋನಿ-ಆನ್ ಸಿಂಗ್ ಮಿಸ್ ವರ್ಲ್ಡ್ 2019ರ ಕಿರೀಟ ಧರಿಸಿದ್ದರು.
Advertisement
Advertisement
ಸುಮನ್ ಅವರು ಉದಯಪುರ ಬಳಿಯ ಆಯದನ್ ಗ್ರಾಮದಲ್ಲಿ ಜನಿಸಿದ್ದು, ನಂತರ ಚಿಕ್ಕವರಿದ್ದಾಗಲೇ ಅವರ ಕುಟುಂಬ ಮುಂಬೈಗೆ ಶಿಫ್ಟ್ ಆಯಿತು. ಸುಮನ್ ತಂದೆ ಆಭರಣ ವ್ಯಾಪಾರಿಯಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಇಬ್ಬರು ಸಹೋದರರಿದ್ದಾರೆ.
Advertisement
ಶಾಲೆ ನಂತರ ಸುಮನ್ ಮುಂಬೈ ವಿಶ್ವವಿದ್ಯಾಲಯದಲ್ಲಿ ಲೆಕ್ಕಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಕಥಕ್ ಕೂಡ ಕಲಿತಿದ್ದಾರೆ. 2018ರಲ್ಲಿ ಮಿಸ್ ನವಿ ಮುಂಬೈನಲ್ಲಿ ಭಾಗವಹಿಸಿ ಮೊದಲ ರನ್ನರ್ ಅಪ್ ಆಗಿದ್ದರು. ನಂತರ ಮಿಸ್ ರಾಜಸ್ಥಾನ ಆಡಿಶನ್‍ನಲ್ಲಿ ಭಾಗವಹಿಸಿ ಮಿಸ್ ರಾಜಸ್ಥಾನ್ ಆಗಿ ಹೊರಹೊಮ್ಮಿದ್ದರು.
Advertisement
ಮಿಸ್ ಇಂಡಿಯಾ 2019 ಸೌಂದರ್ಯ ಸ್ಪರ್ಧೆಯಲ್ಲಿ ರಾಜಸ್ಥಾನ ಪ್ರತಿನಿಧಿಸಿ ಕಿರೀಟವನ್ನು ಗೆದ್ದಿದ್ದರು. ಮಿಸ್ ಇಂಡಿಯಾದಲ್ಲಿ ಜಯಗಳಿಸಿದ ನಂತರ ಸಂದರ್ಶನವೊಂದರಲ್ಲಿ ಭಾಗವಹಸಿದ ಸಂದರ್ಭದಲ್ಲಿ ಜಾಗತಿಕವಾಗಿ ಲಿಂಗ ಸಮಾನತೆ ಕುರಿತು ಚರ್ಚೆಯಾಗಬೇಕು ಎಂದು ಹೇಳಿದ್ದರು.
ಸುಮನ್ ರಾವ್ ದೀಪಿಕಾ ಪಡುಕೋಣೆಯವರ ಅಭಿಮಾನಿಯಾಗಿದ್ದು, ನಟಿಯಾಗಬೇಕೆಂಬ ಬಯಕೆ ಹೊಂದಿದ್ದಾರೆ. ಕಳೆದ ಕೆಲವು ತಿಂಗಳಿಂದ ಮಾಡೆಲಿಂಗ್ ಅಭ್ಯಾಸ ಹಾಗೂ ಓದುವುದರಲ್ಲಿ ಬ್ಯೂಸಿಯಾಗಿದ್ದಾರೆ.