‘ರಾಬರ್ಟ್’ ಸೆಟ್‍ನಲ್ಲಿ ಸುಮಲತಾ ಗೆಲುವಿನ ಸಂಭ್ರಮ

Public TV
1 Min Read
darshan cake collage

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ‘ರಾಬರ್ಟ್’ ಸೆಟ್‍ನಲ್ಲಿ ಸುಮಲತಾ ಅವರ ಗೆಲುವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ.

ರಾಬರ್ಟ್ ಸಿನಿಮಾ ಸೆಟ್‍ನಲ್ಲಿ ದರ್ಶನ್ ಅವರು ಕೇಕ್ ಕಟ್ ಮಾಡುವ ಮೂಲಕ ಸುಮಲತಾ ಅವರ ಗೆಲುವನ್ನು ಸಂಭ್ರಮಿಸಿದ್ದಾರೆ. ದರ್ಶನ್ ಕೇಕ್ ಕಟ್ ಮಾಡಿದ ಫೋಟೋವನ್ನು ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

ತರುಣ್ ಸುಧೀರ್ ತಮ್ಮ ಟ್ವಿಟ್ಟರಿನಲ್ಲಿ, “ಮಂಡ್ಯ ಜನತೆಗೆ ಗೊತ್ತು, ಯಾವುದು ಸರಿ ಯಾವುದು ತಪ್ಪು. ಸ್ವಾಭಿಮಾನಕ್ಕೆ ಇದೆ ತಾಕತ್ತು. ಅದಕ್ಕೆ ಗೆದ್ದು ಬಂತು ಜೋಡೆತ್ತು. ಶುಭಾಶಯಗಳು ಸುಮಲತಾ ಅಮ್ಮ. ನಿಮ್ಮ ಗೆಲುವು ಚಿತ್ರರಂಗದ ಹೆಮ್ಮೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಫಲಿತಾಂಶ ಹೊರಬಂದ ಮಂಡ್ಯ ಜನತೆಗೆ ಧನ್ಯವಾದ ತಿಳಿಸಿ ವಿಡಿಯೋ ಟ್ವೀಟ್ ಮಾಡಿರುವ ದರ್ಶನ್, ಮಂಡ್ಯ ಲೋಕಸಭಾ ಜನತೆ ತೋರಿಸುವ ಜನತೆಯ ಪ್ರೀತಿಗೆ ಸದಾ ಚಿರಋಣಿಯಾಗಿರುತ್ತೇನೆ. ಅಂದು ಒಂದೇ ಮಾತು ಹೇಳಿದ್ದು, ಈಗಲೂ ಅದನ್ನೇ ಹೇಳುತ್ತೇನೆ. ಸಾವಯುವವರೆಗೂ ನಿಮ್ಮ ಋಣದಲ್ಲಿ ಇರುತ್ತೇವೆ ಎಂದಿದ್ದರು.

ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *