ಮಂಡ್ಯ: ಮೈಸೂರಿನಲ್ಲಿ ಇಂದು ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ನೆನಪಿಸಿ ಹೊಗಳಿದ್ದಕ್ಕೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಅಂಬರೀಶ್ ಅವರನ್ನ ನೆನಪು ಮಾಡಿಕೊಂಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನಗೆ ಹೇಳಲು ಪದಗಳೇ ಬರುತ್ತಿಲ್ಲ. ಮೋದಿ ಅವರಿಗೆ “ಹಾರ್ಟ್ ಫೆಲ್ಟ್ ಥ್ಯಾಂಕ್ಸ್”. ಇದು ಹೆಮ್ಮೆ ಪಡುವಂತ ವಿಚಾರ. ಇದಕ್ಕೆ ಕಾರಣ ಅಂಬರೀಶ್ ಅವರ ಸಾಧನೆ. ಮೋದಿ ಈ ಮಾತಿನಿಂದ ನಮ್ಮ ಕಾರ್ಯಕರ್ತರಲ್ಲಿ ಇನ್ನಷ್ಟು ಸ್ಫೂರ್ತಿ ಬರುತ್ತದೆ ಎಂದು ಅಭಿನಂದಿಸಿದರು. ಇದನ್ನೂ ಓದಿ:ಸುಮಲತಾಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ: ಪ್ರಧಾನಿ ಮೋದಿ
ಮೈಸೂರಿನಲ್ಲಿ ಅಂಬಿಯನ್ನು ನೆನೆದ ಮೋದಿ ಅವರು, ಅಂಬರೀಶ್ ಅವರು ನಾಡಿಗಾಗಿ, ಕನ್ನಡ ಸಂಸ್ಕೃತಿಗಾಗಿ ತುಂಬಾ ಕೆಲಸ ಮಾಡಿದ್ದಾರೆ. ಈಗ ಸುಮಲತಾ ಅವರು ಕೂಡ ಅವರ ಹಾದಿಯಲ್ಲಿ ಹೋಗುತ್ತಿದ್ದಾರೆ ಎನ್ನುವ ಮೂಲಕ ಸುಮಲತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ, ನಟ ಅಂಬರೀಶ್ ಕನ್ನಡ ನಾಡಿನ ಜನರ ಹೃದಯದಲ್ಲಿದ್ದಾರೆ. ಅಂಬರೀಶ್ ಅವರು ಸುಮಲತಾ ಜೊತೆ ಸೇರಿಕೊಂಡು ಈ ಸಂಸ್ಕೃತಿ ಸೇವೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮೋದಿ ಮನವಿ ಮಾಡಿದ್ದಾರೆ.