ಮೈಸೂರು: ಮಂಡ್ಯದಲ್ಲಿ ಸ್ಪರ್ಧೆ ಮಾಡುವಂತೆ ಬಿಜೆಪಿ ಅವರಿಂದ ಆಫರ್ ಬಂದರೆ ಯೋಚನೆ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿ ಸಂಚಲ ಮೂಡಿಸಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಅವರು, ನನ್ನ ಬಳಿ ಬಂದು ಯಾರು ನೇರವಾಗಿ ಮಾತನಾಡಿಲ್ಲ. ಬಿಜೆಪಿಯವರ ಮೈಂಡ್‍ನಲ್ಲಿ ಏನಿದೆ ಅಂತ ಗೊತ್ತಿಲ್ಲ. ಅಲ್ಲಿ ಇಲ್ಲಿ ಅವರ ಹೇಳಿಕೆಯನ್ನ ಕೇಳಿದ್ದೇನೆ. ನನ್ನ ಬಳಿಗೆ ಅದು ಬಂದಿಲ್ಲ. ಬಂದಾಗ ಆ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಸದ್ಯಕ್ಕೆ ಇದುವರೆಗೂ ನನ್ನನ್ನು ಯಾರು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ಜನರ ಮನವಿಗೆ ಸ್ಪಂಧಿಸಿ ನಾನು ಅವರ ಪರ ನಿಂತುಕೊಳ್ಳುಲು ನಿರ್ಧಾರ ಮಾಡಿದ್ದೇನೆ. ಆದರೆ ಯಾವ ದಾರಿಯಲ್ಲಿ ಹೋಗಬೇಕು ಎಂಬ ಗೊಂದಲ ಇದೆ. ಇದುವರೆಗೂ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಡುತ್ತದೆ ಎಂದುಕೊಂಡಿದ್ದೆ. ಅದು ಸಾಧ್ಯವಾಗಿಲ್ಲ, ಸದ್ಯಕ್ಕೆ ಮುಂದಿನ ದಾರಿ ಏನು ಎಂದು ಜನರನ್ನು ಕೇಳುತ್ತೇನೆ. ಒಂದು ವೇಳೆ ನನಗೆ ಬಿಜೆಪಿಯಿಂದ ಆಫರ್ ಬಂದರೆ ಈ ರೀತಿ ಆಫರ್ ಬಂದಿದೆ ನೀವು ಏನು ಹೇಳುತ್ತೀರಿ ಎಂದು ಜನರನ್ನು ಕೇಳುತ್ತೇನೆ. ಅವರು ಏನು ಹೇಳುತ್ತಾರೆ ಅದನ್ನು ನಾನು ಕೇಳುತ್ತೇನೆ ಎಂದಿದ್ದಾರೆ.
ಒಂದೊಂದು ಸೆಕೆಂಡ್‍ಗೂ ರಾಜಕೀಯದಲ್ಲಿ ಏನು ಬೆಳವಣಿಗೆ ಆಗುತ್ತೆ ಎಂದು ಗೊತ್ತಿಲ್ಲ. ಅಂಬರೀಶ್ ನಂತರ ಅವರ ಪರವಾಗಿ ನಾನು ಸೂಕ್ತ ಎಂದು ಜನರಿಗೆ ಅನ್ನಿಸಿದೆ. ನಾನು ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡಲ್ಲ. ನಂಗೆ ಬೇರೆ ಸ್ಥಾನವೂ ಬೇಡ ಅಂತ ಸುಮಲತಾ ಸ್ಪಷ್ಟ ಪಡಿಸಿದ್ದಾರೆ.
ಇಲ್ಲಿಯವರೆಗೂ ಕಾಂಗ್ರೆಸ್ ಕಾರ್ಯಕರ್ತರು ನಮಗೆ ಬೆಂಬಲ ನೀಡುತ್ತಿದ್ದಾರೆ. ಯಾಕೆಂದರೆ ಇದು ಅವರಿಗೆ ಅಸ್ಥಿತ್ವದ ಪ್ರಶ್ನೆಯಾಗಿದೆ. ನಾವು ಏನ್ ಮಾಡಬೇಕು? ಯಾರ ಪರ ನಿಲ್ಲಬೇಕು, ಯಾರಿಗೋಸ್ಕರ ಹೋರಾಟ ಮಾಡಬೇಕು? ಮುಂದಿನ ಚುನಾವಣೆ ಬಂದರೆ ಯಾರಿಗಾಗಿ ವೋಟ್ ಹಾಕಿ ಎಂದು ಕೇಳಬೇಕು ಎಂಬ ಗೊಂದಲ ಅವರಲ್ಲಿಯೂ ಇದೆ. ಆದರೆ ಸದ್ಯಕ್ಕೆ ಏನು ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಸುಮಲತಾ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv