ಮಂಡ್ಯ: ಇಲ್ಲಿನ ಮಣ್ಣು ಬರೀ ಮುಗ್ಧತೆಯಿಂದ ಕೂಡಿಲ್ಲ. ಅದು ಪ್ರಾಮಾಣಿಕತೆಯಿಂದಲೂ ಕೂಡಿದೆ ಎಂದು ನಟಿ ಸುಮಲತಾ ಅಂಬರೀಶ್ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಸುಮಲತಾ ಅಂಬರೀಶ್ ಅವರು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ, “ಅಂಬರೀಶ್‍ರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಮಂಡ್ಯದ ಪ್ರತಿಯೊಬ್ಬರು ಅಂಬರೀಶ್ ಬಂಧುಗಳು. ಏಕೆಂದರೆ ಅಂಬರೀಶ್‍ರಲ್ಲಿ ಇರುವ ಗುಣವೇ ಮಂಡ್ಯದ ಜನರಲ್ಲಿ ಇದೆ. ಮಂಡ್ಯದ ಮಣ್ಣಿನ ಗುಣದಲ್ಲಿ ಕಪಟವೇ ಇಲ್ಲ. ಸುಳ್ಳುಗಳಿಲ್ಲ. ಸಮಯಕ್ಕೆ ತಕ್ಕ ಹಾಗೆ ಮಾತನಾಡುವ ಜಾಯಮಾನ ಮಂಡ್ಯದ ಮಣ್ಣಿನಲ್ಲಿ ಇಲ್ಲ. ಮಂಡ್ಯದ ಮಣ್ಣು ಬರಿ ಮುಗ್ಧತೆಯಿಂದ ಕೂಡಿಲ್ಲ. ಅದು ಪ್ರಾಮಾಣಿಕತೆಯಿಂದಲೂ ಕೂಡಿದೆ. ಆ ಪ್ರಾಮಾಣಿಕತೆಗೆ ಮೋಸವೆಸಗುವ ರಾಜಕೀಯ ನನಗೆ ಬೇಕಾಗಿಲ್ಲ. ನನ್ನದು ಪ್ರಾಮಾಣಿಕವಾದ, ಅಂಬರೀಶ್ ಪಾಲಿಸುತ್ತಿದ್ದ ರಾಜಕೀಯ ಮಂಡ್ಯದ ಜನರ ರಾಜಕೀಯ” ಎಂದು ಪೋಸ್ಟ್ ಹಾಕಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಸುಮಲತಾ ಅವರು, “ಅಂಬರೀಶ್ ರಾಜಕೀಯ ನಾಟಕವಿಲ್ಲದ, ಸುಳ್ಳು ಭರವಸೆಗಳಿಲ್ಲದ, ಒಳಗೊಂದು ಹೊರಗೊಂದು ಮಾತುಗಳಿಲ್ಲದ, ಜನರಿಂದ ಕೆಲಸವಾಗಬೇಕು ಎಂದಾಗ ಜನರೆದುರು ಕಪಟ ನಾಟಕವಾಡಿ ಮೋಸಗೊಳಿಸದ, ನೇರಾನೇರ ಇದ್ದದ್ದು ಇದ್ದ ಹಾಗೆ ಹೇಳುವ ದಿಟ್ಟ ನಡೆಯ ರಾಜಕೀಯ ಅಂಬರೀಶ್ ರಾಜಕೀಯ. ಆ ರಾಜಕೀಯವೇ ಅತ್ಯುತ್ತಮ. ಅಂಬರೀಶ್ ರಾಜಕೀಯವೇ ನಮ್ಮದಾಗಲಿ ಎಂದು ಸುಮಲತಾ ಜೆಡಿಎಸ್ ವರಿಷ್ಠರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv