ನವದೆಹಲಿ : ಅಭಿಷೇಕ್ ಅವರ ಅಪ್ಪನ ಮಗ. ನಾನು ಏನು ಹೇಳಿದರು ಅವನು ಕೇಳಲ್ಲ. ಚುನಾವಣೆ ಸ್ಪರ್ಧೆ ಮಾಡುವುದರ ಬಗ್ಗೆ ಅವನೇ ನಿರ್ಧಾರ ಮಾಡುತ್ತಾನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ, ಅಭಿಷೇಕ್ ಸ್ಪರ್ಧೆ ಮಾಡುವುದರ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ.
ರಾಷ್ಟ್ರೀಯ ಪಕ್ಷಗಳಿಂದ ಅಭಿಷೇಕ್‌ಗೆ ಆಹ್ವಾನ ಬಂದಿದೆ. ರೈತ ಸಂಘದಿಂದಲೂ ಸ್ಪರ್ಧಿಸಲು ಜನರು ಮನವಿ ಮಾಡಿದ್ದಾರೆ. ಅಭಿಷೇಕ್ ಭೇಟಿ ನೀಡುವ ಎಲ್ಲ ಊರುಗಳಲ್ಲೂ ಜನರು ತಮ್ಮ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಅಭಿಷೇಕ್ ಈವರೆಗೂ ಚುನಾವಣೆಗೆ ಸ್ಪರ್ಧೆ ಮಾಡುವುದರ ಬಗ್ಗೆ ನಿರ್ಧಾರ ಮಾಡಿಲ್ಲ. ಇದನ್ನೂ ಓದಿ: ಅಲ್ಪಮತಕ್ಕೆ ಕುಸಿದ ಇಮ್ರಾನ್ ಖಾನ್ ಸರ್ಕಾರ- ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಸಾಧ್ಯತೆ
ನಾನು ಈ ಬಗ್ಗೆ ಚರ್ಚಿಸುವ ಪ್ರಯತ್ನ ಮಾಡಿದರೂ ಅದಕ್ಕೆ ಅಭಿಷೇಕ ಉತ್ತರಿಸಿಲ್ಲ. ಇದರಿಂದ ನಾನು ಕೆಲವು ದೊಡ್ಡ ನಾಯಕರು ನನ್ನ ಮೇಲೆ ಬೇಸರವಾಗಿದ್ದಾರೆ. ಸದ್ಯ ಸಿನಿಮಾ ಬಗ್ಗೆ ಹೆಚ್ಚು ಕೇಂದ್ರಿಕರಿಸಿರುವ ಅಭಿಷೇಕ್ ಮುಂದಿನ ವರ್ಷ ಮಾರ್ಚ್ – ಏಪ್ರಿಲ್ ನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಇಮ್ರಾನ್ ಖಾನ್ ಕೊನೆಯ ಬಾಲ್ ವರೆಗೂ ಹೋರಾಡುತ್ತಾರೆ, ರಾಜೀನಾಮೆ ಕೊಡಲ್ಲ: ಪಾಕ್ ಸಚಿವ