ಬೆಂಗಳೂರು: ಮಗನ ಗೆಲುವಿಗೆ ಬೆಂಗಳೂರಿನ ಕುಡಿಯುವ ನೀರನ್ನು ಮಂಡ್ಯದ ನಾಲೆಗೆ ಹರಿಸಿದ್ದಾರೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸಿಎಂ ಕುಮಾರಸ್ವಾಮಿ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ಈ ದೇಶದ ರೈತರು ಮುಖ್ಯ. ಅನ್ನ ಬೆಳೆಯೋ ರೈತರಿಗೆ ಮೊದಲ ಆದ್ಯತೆ ನೀಡಬೇಕು. ರೈತರಿಗೆ ನೀರು ನೀಡದಿದ್ದರೆ ನಮಗೆ ತಿನ್ನಲು ಆಹಾರ ಎಲ್ಲಿಂದ ಬರುತ್ತೆ? ರೈತರಿಲ್ಲ ಅಂದ್ರೆ ನಾವು ಬದುಕಲು ಸಾಧ್ಯವಿಲ್ಲ ಎನ್ನುತ್ತಾ ಮಂಡ್ಯದ ರೈತರ ಜಮೀನಿಗೆ ನೀರು ಹರಿಸುವುದು ಸರಿ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ:ಬೆಂಗ್ಳೂರಿನ ಕುಡಿಯುವ ನೀರನ್ನು ಮಗನಿಗಾಗಿ ಮಂಡ್ಯಕ್ಕೆ ಧಾರೆಯೆರೆದ ಸಿಎಂ!
Advertisement
Advertisement
ಮಂಡ್ಯಕ್ಕೆ ಬೆಂಗಳೂರು ನೀರು:
ಮಂಡ್ಯ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ಹಾಗೂ ಸುಮಲತಾ ಅಂಬರೀಶ್ ಮುಖಾಮುಖಿ ಆಗಿರುವುದು ಈಗ ಬೆಂಗಳೂರಿಗೆ ಮಹಾನ್ ಕಂಟಕ ತಂದೊಡ್ಡಿದೆ. ಮಂಡ್ಯವ್ಯೂಹ ಭೇದಿಸಲು, ಮಗನ ಗೆಲುವಿಗಾಗಿ ಪಣ ತೊಟ್ಟಿರುವ ಸಿಎಂ, ಕುಡಿಯೋದಕ್ಕೆಂದು ಬೆಂಗಳೂರಿಗೆ ಮೀಸಲಾಗಿಟ್ಟ ನೀರನ್ನು ಮಂಡ್ಯದ ಜನರ ಕೃಷಿ ಹಾಗೂ ಕುಡಿಯಲು ಕಾಲುವೆಗೆ ಹರಿಸಲು ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಸಾಮಾನ್ಯವಾಗಿ ಬೇಸಿಗೆ ಬಂದರೆ ಮಂಡ್ಯ ಭಾಗದಲ್ಲಿ ಕೃಷಿಗೆ ನೀರನ್ನು ಕಡಿಮೆ ಪ್ರಮಾಣದಲ್ಲಿ ಬಿಡಲಾಗುತ್ತದೆ. ಯಾಕೆಂದರೆ ಮೈಸೂರು-ಬೆಂಗಳೂರು ಸೇರಿದಂತೆ ಒಟ್ಟು 13 ಟಿಎಂಸಿ ನೀರು ಕುಡಿಯೋದಕ್ಕೆ ಬೇಕಾಗುತ್ತದೆ. ಆದ್ದರಿಂದ ಸರ್ಕಾರವೇ ಭತ್ತ ಬೆಳೆಯಬೇಡಿ ಎಂದು ಮಂಡ್ಯದ ರೈತರಿಗೆ ಸೂಚನೆ ಕೊಡುತ್ತದೆ. ಆದ್ರೆ ಈ ಬಾರಿ ಮಾತ್ರ ದಿನದ 24 ಗಂಟೆಯೂ ಮಂಡ್ಯ ಕಾಲುವೆಯಲ್ಲಿ ಭರಪೂರ ನೀರು ಹರಿಯುತ್ತದೆ. ಬೆಂಗಳೂರಿಗೆ ಬಿಡುತ್ತಿದ್ದ ನೀರನ್ನು ಮಂಡ್ಯಕ್ಕೆ ಬಿಡಲು ಸಿಎಂ ಜಲಮಂಡಳಿಗೆ ಸೂಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.