ಮಂಡ್ಯ: ಮೈತ್ರಿ ಟಿಕೆಟ್ ಸಿಗತ್ತೋ? ಸಿಗಲ್ವೋ ಎಂಬ ಡೌಟ್ ನನಗೆ ಇಲ್ಲ. ನನಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಸಂಸದೆ ಸುಮಲತಾ (Sumalatha) ಹೇಳಿದ್ದಾರೆ.
ಮಂಡ್ಯದಲ್ಲಿ (Mandya) ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಜೆಡಿಎಸ್‍ನವರು (JDS) ನನಗೆ ಟಿಕೆಟ್ ಸಿಕ್ಕರೆ ಮೈತ್ರಿ ಧರ್ಮ ಪಾಲನೆ ಮಾಡ್ತಾರೆ ಎಂಬ ನಂಬಿಕೆ ಇದೆ. ಈ ಬಗ್ಗೆ ಜೆಡಿಎಸ್ ಬಳಿ ಹೋಗಿ ನಾನು ಕೇಳಿಕೊಳ್ಳುತ್ತೇನೆ. ಭಾನುವಾರ ಸಭೆಯಲ್ಲಿ ಐದು ವರ್ಷದ ಜರ್ನಿಯಲ್ಲಿ ಏನಾಯಿತು, ಮುಂದಿನ ನಡೆ ಏನಾಗಿರಬೇಕು ಎಂಬ ಚರ್ಚೆ ನಡೆದಿದೆ. ತುಂಬಾ ಪಾಸಿಟಿವ್ ಅಂಶಗಳು ಸಭೆಯಲ್ಲಿ ಹೊರ ಬಂತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿಂಹಗಳಿಗೆ ಅಕ್ಬರ್-ಸೀತಾ ನಾಮಕರಣ ಮಾಡಿದ್ದ ಅಧಿಕಾರಿ ಅಮಾನತು
ಸಭೆಯಲ್ಲಿ ಬಿಜೆಪಿಯಿಂದ (BJP) ಟಿಕೆಟ್ ತೆಗೆದುಕೊಂಡು ನಿಲ್ಲಿ ಎಂದು ಹೇಳಿದ್ದು, ಮಂಡ್ಯವನ್ನು ಬಿಡಬೇಡಿ. ನಾವು ನಿಮ್ಮನ್ನು ನಂಬಿದ್ದೇವೆ ಎಂಬ ಅಭಿಪ್ರಾಯ ಬಂದಿದೆ. ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಆದರೆ, ಬಿಜೆಪಿಗೆ ನನ್ನ ಜೊತೆ ದ್ವೇಷ ಇರುತ್ತಾ? ಜೆಡಿಎಸ್ ಎನ್‍ಡಿಎ ಒಂದು ಭಾಗ. ಅದೇ ರೀತಿ ನಾನು ಸಹ ಎನ್‍ಡಿಎ ಒಂದು ಭಾಗವಾಗಿದ್ದೇನೆ. ಚುನಾವಣೆಯಲ್ಲಿ ಮಹಿಳಾ ಮಿಸಲಾತಿ ತಂದಿದ್ದು ಬಿಜೆಪಿ. ಹೀಗಾಗಿ ನನಗೆ ಮಂಡ್ಯ ಟಿಕೆಟ್‍ನ್ನು ಬಿಜೆಪಿ ನೀಡಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಮೈತ್ರಿ ವಿಚಾರ ಬಂದ ಮೇಲೆ ಜೆಡಿಎಸ್‍ನವರು ವಿಶ್ವಾಸ ತೋರಿಸುತ್ತಾರೆ. ನಾನು ಅಭ್ಯರ್ಥಿ ಆದರೆ ಜೆಡಿಎಸ್ ಅವರ ಬಳಿ ಹೋಗಿ ಮೈತ್ರಿ ವಿಶ್ವಾಸದಿಂದ ಇರಿ ಎಂದು ಕೇಳುತ್ತೇನೆ. ಮೈತ್ರಿಯಲ್ಲಿ ಜೆಡಿಎಸ್ ವಿಶ್ವಾಸದಲ್ಲಿ ಇರುತ್ತೆ ಎಂಬ ನಂಬಿಕೆ ಇದೆ. ಯಾರಿಗೆ ಟಿಕೆಟ್ ಎಂದು ಹೇಳಬೇಕಿರೋದು ನಾಯಕರು ಅವರು ಎಲ್ಲವನ್ನೂ ನೋಡಿ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ನೀಡುತ್ತಾರೆ. ಜೆಡಿಎಸ್‍ಗೆ ಟಿಕೆಟ್ ಆದ್ರೆ ಅವರು ನನ್ನ ಕೇಳಿದ್ರೆ ನಾನು ಮೈತ್ರಿ ವಿಶ್ವಾಸದಲ್ಲಿ ಇರುತ್ತೇನೆ. ಇದು ಕೊನೆಯಲ್ಲ, ಮುಂದೆ ಏನಾಗುತ್ತೆ ಕಾದು ನೋಡಿ ಎಂದಿದ್ದಾರೆ. ಇದನ್ನೂ ಓದಿ: ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಅನ್ನೋ ಭಾವನೆ- ಅಭಿಯಾನದ ವಿರುದ್ಧ ಶೋಭಾ ರೆಬೆಲ್