ಬೆಂಗಳೂರು: ಮಂಡ್ಯದ ಮುಸ್ಕಾನ್ ಅವರನ್ನು ತನಿಖೆ ನಡೆಸಿದರೆ ತಪ್ಪೇನೂ ಇಲ್ಲ. ತನಿಖೆ ನಡೆದರೆ ಸತ್ಯ ಹೊರಗೆ ಬರುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಮುಸ್ಕಾನ್‍ಗೆ ಸಂಘಟನೆ ಸಂಪರ್ಕ ಬಗ್ಗೆ ತನಿಖೆಗೆ ಆಗ್ರಹಿಸಿ ಸಿಎಂಗೆ ಸಂಸದ ಅನಂತ್ ಕುಮಾರ್ ಹೆಗ್ಡೆ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿದರು. ಸಂಘಟನೆಗಳು, ಸಮುದಾಯದ ಮುಖಂಡರ ಹೇಳಿಕೆಗಳಿಗೆ ಬಡವರು ಬಲಿಯಾಗುತ್ತಿದ್ದಾರೆ. ಎಲ್ಲರೂ ಶಾಂತಿಯಿಂದ ಇರಬೇಕಾಗುತ್ತದೆ. ಸರ್ಕಾರ ಸುಮ್ಮನೆ ಇಲ್ಲ. ಪ್ರಚೋದನೆ ಯಾರು ಮಾಡ್ತಾರೆ ಎಂದು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ತನಿಖೆ ಆಗಬೇಕು, ವೀಡಿಯೋದಲ್ಲಿ ಹೇಳಿರೋದು ನಿಜವಾ ಇಲ್ವಾ ಅಂತ ಗೊತ್ತಾಗುತ್ತದೆ. ಇನ್ನೊಬ್ರು ಆ ವೀಡಿಯೋ ನಕಲಿ ಅಂದರು. ತನಿಖೆ ಆದರೆ ಸಂಚು ಇದೆಯಾ ಇಲ್ವಾ ಎಂದು ತಿಳಿಯುತ್ತದೆ. ಮಂಡ್ಯದಲ್ಲಿ, ರಾಜ್ಯದಲ್ಲಿ ವಾತಾವರಣ ಶಾಂತಿಯಿಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮಗಳಿಗೆ ಬಂದ ಹಣವನ್ನು ಜನ ಸೇವೆಗೆ ಕೊಡ್ತೀನಿ: ಮುಸ್ಕಾನ್ ತಂದೆ
ಸಮುದಾಯದ ನಾಯಕರು, ರಾಜಕೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾರೂ ಶಾಂತಿ ವಾತಾವರಣ ಕೆಡಿಸುವ ಹೇಳಿಕೆ ಕೊಡಬಾರದು. ರಾಜಕೀಯ ಲಾಭಕ್ಕೆ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ
ಇದೇ ವೇಳೆ ಬಿಜೆಪಿಗೆ ಸೇರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಎಲೆಕ್ಷನ್‍ಗೆ ನಿಂತಾಗಿನಿಂದ ಈ ಮಾತು ಕೇಳಿಬರ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿ ನನ್ನ ಉದ್ದೇಶವಾಗಿದೆ. ಈಗ ಯಾವುದೇ ಪಕ್ಷ ಸೇರಲು ತಾಂತ್ರಿಕ ಸಮಸ್ಯೆ ಇದೆ. ಜಿಲ್ಲೆಯ ಜನ ಹೇಗೆ ಹೇಳ್ತಾರೆ ಹಾಗೆ ಮಾಡುತ್ತೇನೆ. ಒಂದು ಪಕ್ಷ ಸೇರೋದಿಕ್ಕೆ ಮಂಡ್ಯದ ಜನ ಹೇಳ್ಬೇಕೇ ಹೊರತು ನಾನಾಗಿ ನಾನು ನಿರ್ಧಾರ ತಗೊಳ್ಳಕ್ಕಾಗಲ್ಲ. ಜನ ಹೇಳಿದ್ದಕ್ಕೆ ಪಕ್ಷೇತರ ಆಗಿ ಸ್ಪರ್ಧಿಸಿದ್ದೆ. ಈಗ ಜನ ಅಭಿಷೇಕ್ ಅವರನ್ನೂ ಚುನಾವಣೆಗೆ ನಿಲ್ಸಿ ಅಂತಿದಾರೆ. ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಅಭಿಷೇಕ್‍ಗೆ ಬಿಟ್ಟಿದ್ದು ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್