ಹೈಕಮಾಂಡ್ ಹೇಳುತ್ತೆಂದು ಜೆಡಿಎಸ್‍ಗೆ ಸಪೋರ್ಟ್ ಮಾಡಿದ್ರೆ, ನಮ್ಮ ಕಾರ್ಯಕರ್ತರೇ ಹೊಡಿತಾರೆ : ನಾಗಮಂಗಲ ಕೈ ಅಧ್ಯಕ್ಷ

Public TV
2 Min Read
MND PRASANNA

ಮಂಡ್ಯ: ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಪೋರ್ಟ್ ಮಾಡಲ್ಲ. ಹೈಕಮಾಂಡ್ ಹೇಳುತ್ತೆ ಅಂತ ಜೆಡಿಎಸ್‍ಗೆ ಸಪೋರ್ಟ್ ಮಾಡಿದರೆ ನಾಳೆ ನಮ್ಮ ಕಾರ್ಯಕರ್ತರೇ ನಮಗೆ ಹೊಡಿತಾರೆ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಸನ್ನ ಅವರು, ಹೈಕಮಾಂಡ್ ಹೇಳಿದ್ದನ್ನು ನಾವು ಪಾಲಿಸಬೇಕು. ಅಂದರೆ ನಾವು ಏನೇ ಮಾಡಿದರೂ ಸುಮ್ಮನೆ ಇರಬೇಕು. ಅದು ಬಿಟ್ಟು ಹೈಕಮಾಂಡ್ ಹೇಳಿತು ಎಂದು ನಾವು ಬೇರೆ ಕಡೆ ಹೋದರೆ ನಮ್ಮ ಕಾರ್ಯಕರ್ತರೇ ನಮಗೆ ಹೊಡಿಯುತ್ತಾರೆ. ಈಗ ಇಡೀ ಅಂಬರೀಶ್ ಅಭಿಮಾನಿಗಳು ಕಾಂಗ್ರೆಸ್ ಅವರ ಜೊತೆ ಸೇರಿಕೊಂಡು ನಮಗೆ ಎಚ್ಚರಿಕೆ ಕೊಟ್ಟಿದ್ದಾರೆ. ನೀವು ಏನಾದರೂ ಬೇರೆ ಅವರಿಗೆ ಸಪೋರ್ಟ್ ಮಾಡಿದರೆ ನಿಮಗೆ ಹೊಡೆಯುತ್ತೇವೆ ಎಂದಿದ್ದಾರೆ. ನಾವು ಅವರಿಗೆ ಆ ರೀತಿ ಇಲ್ಲ ನಮ್ಮವರು ಸುಮಲತಾ ಅವರಿಗೆ ಟಿಕೆಟ್ ಕೊಡುತ್ತಾರೆ ಎಂದು ಸಮಾಧಾನ ಮಾಡಿದ್ದೇನೆ ಎಂದರು.

MND SUMALATHA LOKSABHA

ನಾವು ಕೂಡ ಕಾಂಗ್ರೆಸ್ಸಿನಿಂದ ಸುಮಲತಾ ಅವರು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಹೈಕಮಾಂಡ್ ಹೇಳಿದ ಮೇರೆಗೆ ಸಚಿವ ಡಿ.ಕೆ. ಶಿವಕುಮಾರ್ ಅವರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ನಾವು ಕೊನೆಯವರೆಗೂ ಕಾಯುತ್ತೇವೆ. ನಾವು ಜೆಡಿಎಸ್ ಅವರನ್ನು ಬೆಂಬಲಿಸಲ್ಲ ಎಂದು ಹೇಳಿಲ್ಲ. ನಮ್ಮ ಮಂಡ್ಯದವರನ್ನು ಅಭ್ಯರ್ಥಿಯಾಗಿ ಮಾಡಿರಿ ಎಂದು ಹೇಳಿದ್ದೇವೆ. ನೀವು ಮೈತ್ರಿ ಎಂದು ನಿಮಗೆ ಬೇಕಾದವರನ್ನು ನಿಲ್ಲಿಸಿದರೆ ಅದು ಸರಿ ಇಲ್ಲ. ನಮ್ಮ ಮಂಡ್ಯ ಜಿಲ್ಲೆಗೆ ಅದರದ್ದೆ ಆದ ಸ್ಥಾನ-ಮಾನ ಇದೆ. ಸುಮಲತಾ ಅವರಿಗೆ ಜೆಡಿಎಸ್ ಟಿಕೆಟ್ ಕೊಡಿ, ನಾವು ಬೆಂಬಲಿಸುತ್ತೇವೆ ಎಂದು ಪ್ರಸನ್ನ ಅವರು ಹೇಳಿದ್ದಾರೆ.

ಒಂದು ಕಾಂಗ್ರೆಸ್ಸಿನಿಂದ ಸುಮಲತಾ ಅವರು ನಿಲ್ಲಬೇಕು ಅಥವಾ ಜೆಡಿಎಸ್‍ನಿಂದ ಸುಮಲತಾ ಅವರಿಗೆ ಟಿಕೆಟ್ ಕೊಡಿ. ಇಲ್ಲವಾದರೇ ನಮ್ಮ ಮಂಡ್ಯ ಜಿಲ್ಲೆಯವರಿಗೆ ಟಿಕೆಟ್ ಕೊಡಬೇಕು. ರಾಜಕೀಯದಲ್ಲಿ ಅನುಭವ ಇರುವವರನ್ನು ನಿಲ್ಲಿಸಬೇಕು. ಹೈಕಮಾಂಡ್ ಆದೇಶವನ್ನು ನಾವು ಕೇಳುತ್ತೇನೆ. ಆದರೆ ಜನರು ಕೇಳಲ್ಲ. ಈಗಾಗಲೇ ನಮ್ಮ ಕಾರ್ಯಕರ್ತರು ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಾಗಿ ಕೊನೆಯ ಕ್ಷಣದವರೆಗೂ ನಾವು ಕಾಯುತ್ತೇವೆ ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.

vlcsnap 2019 03 12 12h16m53s582

ಇಂದು ಸುಮಲತಾ ಅವರು ನಾಗಮಂಗಲಕ್ಕೆ ಭೇಟಿ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಾಗಮಂಗಲದಲ್ಲಿ ಚುನಾವಣಾ ಸುತ್ತಾಟ ಕೈಗೊಂಡಿರುವ ಸುಮಲತಾ ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎನ್.ಚಲುವರಾಯಸ್ವಾಮಿ ಆಪ್ತ ಪ್ರಸನ್ನ ಸ್ವಾಗತ ಕೋರಿ ಪೋಸ್ಟರ್ ಹಾಕಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *