Chandrayaan 3 ಸಕ್ಸಸ್‌ಗೆ ಭಾಗವಾಗಿರುವ ಮಂಡ್ಯದ ವಿಜ್ಞಾನಿಗೆ ಶ್ಲಾಘಿಸಿದ ಸುಮಲತಾ

Public TV
1 Min Read
sumalatha 1

ಚಂದ್ರಯಾನ 3 (Chandrayaan 3)  ಸಕ್ಸಸ್ ಕಂಡಿದೆ. ಇಸ್ರೋ ಸಾಧನೆ ಇಡೀ ದೇಶವೇ ಹಾಡಿ ಕೊಂಡಾಡುತ್ತಿದೆ. ಇದೀಗ ಚಂದ್ರಯಾನ 3 ಸಕ್ಸಸ್‌ನಲ್ಲಿ ಮಂಡ್ಯದ (Mandya) ಯುವ ವಿಜ್ಞಾನಿಯ ಪಾಲಿದೆ. ಇಸ್ರೋ (Isro) ಸಾಧನೆಯ ಭಾಗವಾಗಿರುವ ಮಂಡ್ಯದ ವಿಜ್ಞಾನಿ ರವಿ ಪಿ ಗೌಡಗೆ (Ravi P Gowda) ನಟಿ ಸುಮಲತಾ ಅಭಿನಂದನೆಗಳನ್ನ ತಿಳಿಸಿದ್ದಾರೆ. ಇದನ್ನೂ ಓದಿ:ಚಂದ್ರನನ್ನು ಮುಟ್ಟಿದ ಭಾರತ- ಇಸ್ರೋ ಸಾಧನೆಗೆ ಭೇಷ್‌ ಎಂದ ಸ್ಟಾರ್ಸ್

chandrayaan 3 2 1

ಚಂದ್ರನನ್ನು ಮುಟ್ಟಿದ ಭಾರತದ ಸಾಧನೆ ಬಗ್ಗೆ ಚಿತ್ರರಂಗದ ಸ್ಟಾರ್ ನಟಿ-ನಟಿಯರು ಅಭಿನಂದನೆಗಳನ್ನ ತಿಳಿಸಿದ್ದಾರೆ. ಇದೀಗ ತಮ್ಮ ಕ್ಷೇತ್ರದ ಯುವ ವಿಜ್ಞಾನಿಗೆ ಸುಮಲತಾ ಭೇಷ್ ಎಂದಿದ್ದಾರೆ. ಈ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ.

ಚಂದ್ರಯಾನ 3 ಯಶಸ್ಸು ಭಾರತೀಯರ ಹೆಮ್ಮೆ. ಇದು ಇತಿಹಾಸದ ಪುಟಗಳಲ್ಲಿ ದಾಖಲಾದ ದಿನ. ಇಂಥದ್ದೊಂದು ಸಾಧನೆಯ ಹಿಂದೆ ವಿಜ್ಞಾನಿಗಳ, ತಂತ್ರಜ್ಞರ ದಣಿವರಿಯದ ಶ್ರಮವಿದೆ. ಕೋಟಿ ಕೋಟಿ ಭಾರತೀಯರ ಪ್ರಾರ್ಥನೆಯ ಫಲವಿದೆ. ಅದರಲ್ಲೂ ನನ್ನ ಕ್ಷೇತ್ರದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆ ಚಿಟ್ಟನಹಳ್ಳಿ ಗ್ರಾಮದ ಯುವಕ ರವಿ .ಪಿ ಗೌಡ (Ravi P Gowda) ಅವರು ಹಿರಿಯ ವಿಜ್ಞಾನಿಯಾಗಿ ಈ ಸಾಧಕರ ತಂಡದಲ್ಲಿ ಸೇವೆ ಸಲ್ಲಿಸಿರುವುದು ಅತ್ಯಂತ ಅಭಿಮಾನ ತಂದಿದೆ. ಇಸ್ರೋ ಚಂದ್ರಯಾನ 3 ತಂಡಕ್ಕೆ ಹಾಗೂ ಸಾಧನೆಯ ಭಾಗವಾಗಿರುವ ರವಿ.ಪಿ ಗೌಡ ಅವರಿಗೆ ವಿಶೇಷ ಅಭಿನಂದನೆಗಳನ್ನ ತಿಳಿಸಿದ್ದಾರೆ. ತಮ್ಮ ಕ್ಷೇತ್ರದ ಯುವ ವಿಜ್ಞಾನಿಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article