ಬೆಂಗಳೂರು: ಲೋಕಸಭಾ ಚುನಾವಣೆಯಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಇದೀಗ ನೂತನ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಸಚಿವ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಸಂಸದೆ ಸುಮಲತಾರನ್ನ ಮಂತ್ರಿ ಮಾಡುವ ಮೂಲಕ ನರೆಂದ್ರ ಮೋದಿ ಅವರು ಪೊಲಿಟಿಕಲ್ ಸರ್ಜಿಕಲ್ ಸ್ಟ್ರೈಕ್ ಮಾಡಲು ಮುಂದಾಗಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಸಚಿವರಾಗುತ್ತಾರ ಎಂಬ ಕುತೂಹಲ ಮೂಡಿದೆ. ಜೊತಗೆ ಪಕ್ಷೇತರ ಸಂಸದೆ ಸುಮಲತಾ ಅವರಿಂದ ಮೋದಿ ಅವರು ಬಾಹ್ಯ ಬೆಂಬಲ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಸುಮಲತಾ ಅವರಿಗೆ ಸಚಿವ ಸ್ಥಾನ ಕೊಡುವ ಯೋಚನೆ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿದ್ದು, ಸುಮಲತಾ ಮಂತ್ರಿ ಮಾಡುವುದರ ಮೂಲಕ ದೇವೇಗೌಡರಿಗೆ ಟಾಂಗ್ ಕೊಡುವ ಲೆಕ್ಕಾಚಾರವನ್ನು ಮೋದಿ ಮಾಡಿದ್ದಾರೆ ಎನ್ನಲಾಗಿದೆ. ಸುಮಲತಾರಿಗೆ ಸಚಿವ ಸ್ಥಾನ ಕೊಟ್ಟು ಜೆಡಿಎಸ್ ಪ್ರಭಾವ ಕಡಿಮೆ ಮಾಡುವ ತಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಮಂಡ್ಯ, ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಭಾವ ಅಧಿಕವಾಗಿದೆ. ಹೀಗಾಗಿ ಅಲ್ಲಿ ಜೆಡಿಎಸ್‍ನ ಪ್ರಭಾವನ್ನು ಕುಗ್ಗಿಸಲು ಮತ್ತು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸುವ ಮೋದಿ ಈ ರೀತಿ ಐಡಿಯಾ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
Advertisement
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದರು. ಹೀಗಾಗಿ ಮೋದಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದರು, ಹಾಗಾಗಿ ಮಂತ್ರಿ ಸ್ಥಾನದ ಕೊಡುತ್ತಾರೆ ಎಂದು ಜನರು ಹೇಳುತ್ತಿದ್ದಾರೆ. ಒಂದು ವೇಳೆ ಸುಮಲತಾ ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಬಿಜೆಪಿ ಮೇಲೆ ಅನುಕಂಪದಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಜನತೆ ಸಂಪೂರ್ಟ್ ಮಾಡುತ್ತಾರೆ ಎಂಬುದು ಮೋದಿ ಅವರ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.