ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರಿಗೂ ಅಂಬರೀಶ್ ಕುಟುಂಬಕ್ಕೂ ಉತ್ತಮ ಬಾಂಧವ್ಯವಿದೆ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ದರ್ಶನ್‌ರನ್ನು ಮನೆಮಗ ಎಂದು ಸುಮಲತಾ (Sumalatha) ಸುಮ್ಮನೆ ಹೇಳೋದಿಲ್ಲ ಎಂಬುದು ಸಾಬೀತಾಗಿದೆ. ಅಂಬರೀಶ್ (Ambareesh) ಧರಿಸುತ್ತಿದ್ದ ವಾಚ್ ಅನ್ನು ದರ್ಶನ್‌ಗೆ ಪ್ರೀತಿಯಿಂದ ಸುಮಲತಾ ಉಡುಗೊರೆ ಆಗಿ ನೀಡಿದ್ದಾರೆ.
ಅಂಬರೀಶ್ ಅವರ ಬಳಿ ಅದೆಷ್ಟೇ ಬೆಲೆ ಬಾಳುವ ವಾಚ್ ಇದ್ರೂ ಕೂಡ ಅವರು ಡೈಮಂಡ್ ಮತ್ತು ಬಂಗಾರ ಮಿಶ್ರಿತ ವಾಚ್ ಅನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಅದೇ ಈಗ ಈಗ ದರ್ಶನ್ ಕೈ ಸೇರಿದೆ. ಮನೆಮಗನಿಗೆ ಪ್ರೀತಿಯಿಂದ ಪತಿಯ ದುಬಾರಿ ಬೆಲೆಯ ವಾಚ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇತ್ತೀಚೆಗೆ ‘ಕಾಟೇರ’ ಸಕ್ಸಸ್ ಮೀಟ್‌ನಲ್ಲಿ ಮದರ್ ಇಂಡಿಯಾ ಸುಮಲತಾ ಕೊಟ್ಟ ವಾಚ್ ಅನ್ನು ದರ್ಶನ್ ಧರಿಸಿದ್ದರು. ಇದು ಅಭಿಮಾನಿಗಳ ಗಮನ ಸೆಳೆದಿತ್ತು.
ಅಂದಹಾಗೆ, ‘ಕಾಟೇರ’ (Kaatera Film) ಸಿನಿಮಾದ ಸಕ್ಸಸ್ ನಂತರ ದರ್ಶನ್ 10ಕ್ಕೂ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:‘ಕೊರಗಜ್ಜ’ ಚಿತ್ರಕ್ಕೆ ಅಭಯ ನೀಡಿದ ದೈವ ಕೊರಗಜ್ಜ
ರಮೇಶ್ ಪಿಳ್ಳೈ, ಶೈಲಜಾ ನಾಗ್, ಮೋಹನ್ ನಟರಾಜನ್, ಸೂರಪ್ಪ ಬಾಬು, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಇಂತಹ ನಿರ್ದೇಶಕರ ಜೊತೆ ಸಿನಿಮಾ ಮಾಡಲು ದರ್ಶನ್ ಓಕೆ ಅಂದಿದ್ದಾರೆ. ‘ಡೆವಿಲ್’ ಚಿತ್ರದ ನಂತರ ಬೇರೆ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ.