ಬೆಂಗಳೂರು: ಮಂಡ್ಯದಲ್ಲಿ ಸರ್ಕಾರದ ದುರುಪಯೋಗ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪಾರದರ್ಶಕ ಚುನಾವಣೆಗೆ ಆಯೋಗ ಹೆಚ್ಚಿನ ಅಧಿಕಾರಿಗಳನ್ನು ಹಾಕಬೇಕು. ಬೆದರಿಕೆಯ ಹೇಳಿಕೆಗಳು ಹೆಚ್ಚಾಗುತ್ತಿವೆ. ಇದರಿಂದ ಪ್ರಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಎಂದು ಹೇಳಿ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಯಾವುದೇ ಬೆಂಬಲಿಗರಿಲ್ಲದೆ ಸಂಬಂಧಿಯೊಬ್ಬರ ಜತೆ ಬಂದು ಸುಮಲತಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
Advertisement
Advertisement
ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸುಮಲತಾ ಅಂಬರೀಶ್‍ಗೆ ಭದ್ರತೆ ಕೊಡಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‍ಗೆ ಟ್ವೀಟ್ ಮೂಲಕ ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಮನವಿ ಮಾಡಿಕೊಂಡಿದ್ದಾರೆ. ಲಿಂಬಾವಳಿ ಅವರ ಟ್ವೀಟ್ ಅನ್ನು ಸುಮಲತಾ ಅವರು ಮೆಚ್ಚಿ ಲೈಕ್ ಮಾಡಿದ್ದಾರೆ.
Advertisement
I urge @rajnathsingh ji to kindly provide security to @TheNameIsYash & @sumalathaA since their is a massive attempt by state govt to impose political dictatorship in Karnataka
Constitutional rights of people in the state are in danger https://t.co/lrp4aHf0vO
— Aravind Limbavali (@ArvindLBJP) March 23, 2019
Advertisement
ರಾಜನಾಥ್ ಸಿಂಗ್ ಅವರೇ ದಯಮಾಡಿ ಸುಮಲತಾ, ಯಶ್ ಹಾಗೂ ದರ್ಶನ್ ಅವರಿಗೆ ಭದ್ರತೆ ನೀಡಿ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಾಜಕೀಯ ಸರ್ವಾಧಿಕಾರ ಆಡಳಿತ ಮಾಡುತ್ತಿದೆ. ಜನರ ಸಂವಿಧಾನಾತ್ಮತ ಹಕ್ಕುಗಳು ಅಪಾಯದಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಹಲವು ಬಿಜೆಪಿ ನಾಯಕರು ಹಾಗೂ ಸುಮಲತಾ ಬೆಂಬಲಿಗರು ರೀ-ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.