– ಪುಗಸಟ್ಟೆ ಭಾಗ್ಯಗಳಿಂದ ಮಂಡ್ಯದ ಜನತೆಗೆ ಮೋಸ ಮಾಡೋಕಾಗಲ್ಲ
– ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ವಾಗ್ದಾಳಿ
ಮಂಡ್ಯ: ನೂತನ ಸಂಸದರಾಗಿ ಆಯ್ಕೆಯಾದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ನಿರ್ಗಮಿತ ಸಂಸದರಾದ ಸುಮಲತಾ ಅಂಬರೀಶ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
- Advertisement -
ಈ ಕುರಿತು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಮಂಡ್ಯದ ಜನತೆಯ ಮತಗಳು ಯಾವುದೇ ಆಮಿಷಗಳಿಗೆ ಮಾರಾಟಕ್ಕಿಲ್ಲ ಎಂಬುದನ್ನು ನಮ್ಮ ಜನತೆ ತೋರಿಸಿದ್ದಾರೆ. ಹಲವು ಆಮಿಷಗಳು, ಪುಗಸಟ್ಟೆ ಭಾಗ್ಯಗಳ ಭರವಸೆ, ಮುಂತಾದ ಅಡ್ಡದಾರಿಗಳ ಮೂಲಕ ನಮ್ಮ ಮಂಡ್ಯದ ಜನತೆಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಸಾಬೀತು ಪಡಿಸಿದ ನಮ್ಮ ಮಂಡ್ಯದ ಜನತೆಗೆ ಅಭಿನಂದನೆಗಳು. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೆಲಸ ಮಾಡಲು, ನಮ್ಮ ಮಂಡ್ಯದ ನೂತನ ಸಂಸದರಾಗಿ ಆಯ್ಕೆಯಾದ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಅಭಿನಂದನೆ ಸಲ್ಲಿಸಿದ್ದಾರೆ.
- Advertisement -
2024ರ ಲೋಕಸಭಾ ಚುನಾವಣೆ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಬಿಜೆಪಿ-ಜೆಡಿಎಸ್ (BJP- JDS) ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. 8,51,881 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) 5,67,261 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.